ಕ್ಯಾನ್ಸರ್‌ ಕುರಿತು ಇಲ್ಲಿದೆ ಮಾಹಿತಿ: ಈ ಪ್ರಮುಖ ಕಾರಣಗಳಿಂದ ಹರಡುತ್ತೆ ಮಾರಕ ಕಾಯಿಲೆ

ಕ್ಯಾನ್ಸರ್‌ ಒಂದು ಮಾರಣಾಂತಿಕ ಕಾಯಿಲೆ. ಇದಕ್ಕೆ ಸರಿಯಾದ ಚಿಕಿತ್ಸೆಯಿಲ್ಲ. ಅಸಹಜ ಜೀವಕೋಶಗಳು ವೇಗವಾಗಿ ವಿಭಜನೆಗೊಳ್ಳಲು ಪ್ರಾರಂಭಿಸಿದಾಗ ಕ್ಯಾನ್ಸರ್‌ ಸಂಭವಿಸುತ್ತದೆ. ಇದು ಇತರ ಅಂಗಾಂಶಗಳು ಮತ್ತು ಅಂಗಗಳಿಗೆ ಹರಡಬಹುದು.

ವೇಗವಾಗಿ ಬೆಳೆಯುತ್ತಿರುವ ಜೀವಕೋಶಗಳು ಗಡ್ಡೆಗಳನ್ನು ಉಂಟುಮಾಡಬಹುದು. ಇವು ದೇಹದ ಸಾಮಾನ್ಯ ಕಾರ್ಯಕ್ಕೆ ಕೂಡ ಅಡ್ಡಿಪಡಿಸುತ್ತವೆ. ಜಗತ್ತಿನಾದ್ಯಂತ ಜನರ ಸಾವಿಗೆ ಕಾರಣವಾಗುತ್ತಿರುವ ಪ್ರಮುಖ ಕಾಯಿಲೆಗಳಲ್ಲಿ ಕ್ಯಾನ್ಸರ್‌ ಕೂಡ ಒಂದು.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, 2020ರಲ್ಲಿ 6 ರಲ್ಲಿ 1 ಸಾವು ಕ್ಯಾನ್ಸರ್‌ನಿಂದಲೇ ಸಂಭವಿಸಿದೆ. ಪ್ರತಿದಿನ ಹೊಸ ಬಗೆಯ ಕ್ಯಾನ್ಸರ್ ಚಿಕಿತ್ಸೆಗಳನ್ನು ಪರೀಕ್ಷಿಸಲು ತಜ್ಞರು ಶ್ರಮಿಸುತ್ತಿದ್ದಾರೆ. ಆದರೆ ನಿರ್ಣಾಯಕ ಚಿಕಿತ್ಸೆ ಇನ್ನೂ ಪತ್ತೆಯಾಗಿಲ್ಲ.

ಕ್ಯಾನ್ಸರ್ ಏಕೆ ಸಂಭವಿಸುತ್ತದೆ ?

ಕ್ಯಾನ್ಸರ್‌ಗೆ ಮುಖ್ಯ ಕಾರಣವೆಂದರೆ ಜೀವಕೋಶಗಳ ರೂಪಾಂತರ ಅಥವಾ ಅದರ ಡಿಎನ್‌ಎ ಬದಲಾವಣೆ. ಇದು ಆನುವಂಶಿಕವಾಗಿಯೂ ಬರಬಹುದು. ಜನನದ ನಂತರ ಪರಿಸರ ಶಕ್ತಿಗಳಿಂದಲೂ ಉಂಟಾಗಬಹುದು.

ಆನುವಂಶಿಕ ಕಾರಣಗಳನ್ನು ತಪ್ಪಿಸುವುದು ಕಷ್ಟ, ಆದರೆ ಕೆಲವು ಬಾಹ್ಯ ಕಾರಣಗಳನ್ನು ತಪ್ಪಿಸಬಹುದು. ಕ್ಯಾನ್ಸರ್‌ನ ಬಾಹ್ಯ ಕಾರಣಗಳನ್ನು ಕಾರ್ಸಿನೋಜೆನ್ಸ್ ಎಂದು ಕರೆಯಲಾಗುತ್ತದೆ, ಅವುಗಳು ಕೆಳಕಂಡಂತಿವೆ:

1. ವಿಕಿರಣ ಮತ್ತು ನೇರಳಾತೀತ ಬೆಳಕಿನಂತಹ ಭೌತಿಕ ಕಾರ್ಸಿನೋಜೆನ್‌ಗಳು.

2. ಸಿಗರೇಟ್ ಹೊಗೆ, ಮದ್ಯ, ಕಲ್ನಾರಿನ ಧೂಳು, ವಾಯು ಮಾಲಿನ್ಯ, ಮತ್ತು ಕಲುಷಿತ ಆಹಾರ, ಕುಡಿಯುವ ನೀರಿನಂತಹ ರಾಸಾಯನಿಕ ಕಾರ್ಸಿನೋಜೆನ್‌ಗಳು.

3. ವೈರಸ್‌ಗಳು, ಬ್ಯಾಕ್ಟೀರಿಯಾಗಳು ಮತ್ತು ಪರಾವಲಂಬಿಗಳಂತಹ ಜೈವಿಕ ಕಾರ್ಸಿನೋಜೆನ್‌ಗಳು.

ಕ್ಯಾನ್ಸರ್ ಒಂದು ಮಾರಕ ರೋಗ

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಸುಮಾರು 33 ಪ್ರತಿಶತದಷ್ಟು ಕ್ಯಾನ್ಸರ್ ಸಾವುಗಳು ತಂಬಾಕು, ಆಲ್ಕೋಹಾಲ್, ಹೆಚ್ಚಿನ ಬಾಡಿ ಮಾಸ್ ಇಂಡೆಕ್ಸ್ (BMI), ಕಡಿಮೆ ಹಣ್ಣು ಮತ್ತು ತರಕಾರಿ ಸೇವನೆ ಮತ್ತು ಸಾಕಷ್ಟು ದೈಹಿಕ ಚಟುವಟಿಕೆ ಮಾಡದೇ ಇರುವುದರಿಂದ ಸಂಭವಿಸುತ್ತವೆ.

ಕ್ಯಾನ್ಸರ್ ವಿಧಗಳು

-ಅಪೆಂಡಿಕ್ಸ್‌ ಕ್ಯಾನ್ಸರ್

-ಮೂತ್ರಕೋಶ ಕ್ಯಾನ್ಸರ್

– ಮೂಳೆ ಕ್ಯಾನ್ಸರ್

– ಮೆದುಳಿನ ಕ್ಯಾನ್ಸರ್

– ಸ್ತನ ಕ್ಯಾನ್ಸರ್

– ಗರ್ಭಕಂಠದ ಕ್ಯಾನ್ಸರ್

-ದೊಡ್ಡ ಕರುಳಿನ ಕ್ಯಾನ್ಸರ್

– ಕಿವಿ ಕ್ಯಾನ್ಸರ್

– ಹೃದಯ ಕ್ಯಾನ್ಸರ್

– ಮೂತ್ರಪಿಂಡದ ಕ್ಯಾನ್ಸರ್

– ಲ್ಯುಕೇಮಿಯಾ

– ತುಟಿ ಕ್ಯಾನ್ಸರ್

– ಯಕೃತ್ತಿನ ಕ್ಯಾನ್ಸರ್

-ಶ್ವಾಸಕೋಶದ ಕ್ಯಾನ್ಸರ್

– ಲಿಂಫೋಮಾ

– ಬಾಯಿಯ ಕ್ಯಾನ್ಸರ್

– ಅಂಡಾಶಯದ ಕ್ಯಾನ್ಸರ್

– ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್

– ಪ್ರಾಸ್ಟೇಟ್ ಕ್ಯಾನ್ಸರ್

-ಚರ್ಮದ ಕ್ಯಾನ್ಸರ್

-ಸಣ್ಣ ಕರುಳಿನ ಕ್ಯಾನ್ಸರ್

– ಗುಲ್ಮ ಕ್ಯಾನ್ಸರ್

– ಯೋನಿ ಕ್ಯಾನ್ಸರ್

– ಗರ್ಭಾಶಯದ ಕ್ಯಾನ್ಸರ್

– ವೃಷಣ ಕ್ಯಾನ್ಸರ್

– ಹೊಟ್ಟೆಯ ಕ್ಯಾನ್ಸರ್‌

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read