ಕೋಟಿಗಟ್ಟಲೆ ಬೆಲೆಬಾಳುವ ಈ ಐಷಾರಾಮಿ ಮನೆಯ ಮಾಲೀಕ ಟೀಂ ಇಂಡಿಯಾದ ಸ್ಟಾರ್‌ ಬೌಲರ್‌

ಟೀಂ ಇಂಡಿಯಾದ ವೇಗದ ಬೌಲರ್‌ ಜಸ್ಪ್ರೀತ್‌ ಬುಮ್ರಾ ಅತ್ಯಂತ ಕಡಿಮೆ ಸಮಯದಲ್ಲಿಯೇ ಯಶಸ್ಸು ಸಾಧಿಸಿದ್ದಾರೆ. ಸದ್ಯ ಬುಮ್ರಾ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬೌಲರ್. ಭಾರತದ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ ಕೂಡ ಒಬ್ಬರು. ಬಿಸಿಸಿಐ ಒಪ್ಪಂದದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರ ಪಟ್ಟಿಯಲ್ಲಿದ್ದಾರೆ ಅವರು.

ಜಸ್ಪ್ರೀತ್ ಬುಮ್ರಾ ಜೊತೆಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಅವರ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ. 29ರ ಹರೆಯದ ಜಸ್ಪ್ರೀತ್ ಬುಮ್ರಾ, ಮುಂಬೈನಲ್ಲಿ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಈ ಮನೆ ಯಾವ ಬಂಗಲೆಗೂ ಕಮ್ಮಿಯಿಲ್ಲ.

ಕ್ರಿಕೆಟ್‌ ಮೈದಾನದಲ್ಲಿ ಬೆವರಳಿಸೋ ಬುಮ್ರಾ, ಮನೆಯಲ್ಲಿ ರಿಲ್ಯಾಕ್ಸ್‌ ಆಗಿರಲು ಇಷ್ಟಪಡ್ತಾರೆ. ಅದಕ್ಕೆ ತಕ್ಕಂತೆ ಅವರ ನಿವಾಸದಲ್ಲಿ ಪ್ರತ್ಯೇಕ ಮನರಂಜನಾ ಕೋಣೆ ಇದೆ. ಅಲ್ಲಿ ಬುಮ್ರಾ ಬಿಡುವಿನ ವೇಳೆಯನ್ನು ಕಳೆಯುತ್ತಾರೆ. ಈ ಕೊಠಡಿಯಲ್ಲಿ ಕುಳಿತು ವಿಡಿಯೋ ಗೇಮ್‌ಗಳನ್ನು ಆಡಲು ಇಷ್ಟಪಡುತ್ತಾರೆ.

ಜಸ್ಪ್ರೀತ್ ಬುಮ್ರಾ ಅವರ ಮನೆಯ ಅಲಂಕಾರ, ಪೀಠೋಪಕರಣಗಳು ತುಂಬಾ ಸುಂದರವಾಗಿವೆ. ತಿಳಿ ಬಣ್ಣವೆಂದರೆ ಬುಮ್ರಾಗೆ ಫೇವರಿಟ್‌, ಹಾಗಾಗಿ ಮನೆಯನ್ನು ಅದೇ ಶೈಲಿಯಲ್ಲಿ ಸಿಂಗರಿಸಿದ್ದಾರೆ. ಬುಮ್ರಾ ಮನೆಯ ಬಾಲ್ಕನಿ ಕೂಡ ಕಣ್ಸೆಳೆಯುವಂತಿದೆ. ಅನೇಕ ಹೂವಿನ ಕುಂಡಗಳು, ವಿಂಡ್ ಚೈಮ್‌ಗಳು ಇಲ್ಲಿನ ಆಕರ್ಷಣೆ.

ಜಸ್ಪ್ರೀತ್ ಬುಮ್ರಾ ಅವರ ಮಲಗುವ ಕೋಣೆಯಲ್ಲಿ ಮರದ ನೆಲಹಾಸು ಇದೆ. ಬುಮ್ರಾಗೆ ಕೋಣೆ ಪೂರ್ಣ ಸ್ವಚ್ಛವಾಗಿರಬೇಕು. ಹಲವು ಬಾರಿ ಖುದ್ದು ಬುಮ್ರಾ, ಕೊಠಡಿಯನ್ನು ಸ್ವಚ್ಛಗೊಳಿಸುತ್ತಾರೆ.

 

 

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read