ಕೆಲಸದಲ್ಲಿ ಸಫಲತೆ ಕಾಣಲು ಮಾಡಿ ಹಾಲಿನಿಂದ ಈ ಸಣ್ಣ ಉಪಾಯ

ಹಾಲು ಆರೋಗ್ಯಕ್ಕೆ ಒಳ್ಳೆಯದು. ಇದು ಎಲ್ಲರಿಗೂ ತಿಳಿದಿರುವ ವಿಷ್ಯ. ಹಾಲು ಹಾಗೂ ಜ್ಯೋತಿಷ್ಯ ಶಾಸ್ತ್ರಕ್ಕೂ ಮಹತ್ವದ ಸಂಬಂಧವಿದೆ. ಹಾಲಿನಿಂದ ಯಶಸ್ಸು ಹಾಗೂ ಸಫಲತೆ ಸಾಧ್ಯವೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಲು ಚಂದ್ರನಿಗೆ ಸಂಬಂಧಿಸಿದ್ದಾಗಿದೆ. ಹಾಲಿನ ಸಣ್ಣ ಉಪಾಯ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಬೆಳಿಗ್ಗೆ ಶಿವಲಿಂಗಕ್ಕೆ ಹಾಲನ್ನು ಅರ್ಪಣೆ ಮಾಡಿದ್ರೆ ಎಲ್ಲ ಗ್ರಹ ದೋಷಗಳು ಕಡಿಮೆಯಾಗುತ್ತವೆ.

ಅನೇಕ ದಿನಗಳಿಂದ ಆರ್ಥಿಕ ಸಂಕಷ್ಟ ಎದುರಾಗಿದ್ದು, ಮನೆಯಲ್ಲಿ ಲಕ್ಷ್ಮಿ ನೆಲೆ ನಿಲ್ಲುತ್ತಿಲ್ಲವೆಂದಾದ್ರೆ ಲೋಹದ ಪಾತ್ರೆಯಲ್ಲಿ ನೀರು, ಹಾಲು, ಸಕ್ಕರೆ, ತುಪ್ಪವನ್ನು ಬೆರೆಸಿ ಅಶ್ವತ್ಥ ಮರಕ್ಕೆ ಅರ್ಪಿಸಬೇಕು. ಹೀಗೆ ಮಾಡಿದ್ರೆ ಹಣದ ಕೊರತೆ ಕಡಿಮೆಯಾಗಿ ಸಂಪತ್ತು, ಸಂತೋಷ ನೆಲೆಸುತ್ತದೆ.

ಭಾನುವಾರ ರಾತ್ರಿ ಒಂದು ಲೋಟ ಹಾಲನ್ನು ಹಾಸಿಗೆ ಬಳಿಯಿಟ್ಟು ಮಲಗಿ. ಬೆಳಿಗ್ಗೆ ಅಂದ್ರೆ ಸೋಮವಾರ ಎದ್ದ ತಕ್ಷಣ ಮುಖ ತೊಳೆದು ಈ ಹಾಲನ್ನು ಅಶ್ವತ್ಥ ಮರದ ಬುಡಕ್ಕೆ ಹಾಕಿ. ಹೀಗೆ ಮಾಡಿದ್ರೆ ತಾಯಿ ಲಕ್ಷ್ಮಿ ಮನೆಯಲ್ಲಿ ಸದಾ ನೆಲೆಸಿರುತ್ತಾಳೆಂಬ ನಂಬಿಕೆಯಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read