ಕೂದಲನ್ನು ಸ್ಟ್ರೈಟ್ ಮಾಡಲು ಬಳಸಿ ಈ ‘ನೈಸರ್ಗಿಕ’ ಪದಾರ್ಥ

ಪ್ರತಿಯೊಬ್ಬರಿಗೂ ಕೂದಲು ಉದ್ದವಾಗಿ ದಪ್ಪವಾಗಿ, ನೇರವಾಗಿ ಬೆಳೆಯಬೇಕೆಂಬ ಆಸೆ ಇರುತ್ತದೆ. ಆದರೆ ಅದಕ್ಕಾಗಿ ರಾಸಾಯನಿಕಯುಕ್ತ ವಸ್ತುಗಳನ್ನು ಬಳಸುವುದರಿಂದ ಕೂದಲು ಹಾಳಾಗುತ್ತದೆ. ಹಾಗಾಗಿ ಕೂದಲನ್ನು ಸ್ಟ್ರೈಟ್ ನಿಂಗ್ ಮಾಡಲು ಬಯಸುವವರು ಕೂದಲಿಗೆ ರಾಸಾಯನಿಕಯುಕ್ತ ಕ್ರೀಂಗಳನ್ನು ಬಳಸುವ ಬದಲು ಈ ನೈಸರ್ಗಿಕವಾದ ವಸ್ತುಗಳನ್ನು ಬಳಸಿ.

ಬಾಳೆಹಣ್ಣು ಮತ್ತು ಪಪ್ಪಾಯ ಮಾಸ್ಕ್ ತಾತ್ಕಾಲಿಕವಾಗಿ ಕೂದಲನ್ನು ನೇರಗೊಳಿಸುತ್ತದೆ. ಹಾಗಾಗಿ ಒಂದು ಹಣ್ಣಾದ ಬಾಳೆಹಣ್ಣಿಗೆ ½ ಹಣ್ಣಾದ ಪಪ್ಪಾಯ ಮತ್ತು 1 ಚಮಚ ಹಾಲನ್ನು ಮಿಕ್ಸ್ ಮಾಡಿ ಪ್ಯಾಕ್ ತಯಾರಿಸಿ ಕೂದಲಿಗೆ ಹಚ್ಚಿ. 45 ನಿಮಿಷ ಬಿಟ್ಟು ತಣ್ಣೀರಿನಿಂದ ವಾಶ್ ಮಾಡಿ. ಉತ್ತಮ ಫಲಿತಾಂಶ ಪಡೆಯಲು ಇದನ್ನು ವಾರಕ್ಕೆ 2 ಬಾರಿ ಮಾಡಿ.

1 ಹಣ್ಣಾದ ಬಾಳೆಹಣ್ಣಿನ ಪೇಸ್ಟ್ ಗೆ 1 ಚಮಚ ಜೇನುತುಪ್ಪ, 1 ಚಮಚ ಆಲಿವ್ ಆಯಿಲ್, 1 ಚಮಚ ಮೊಸರು ಸೇರಿಸಿ ಹೇರ್ ಪ್ಯಾಕ್ ತಯಾರಿಸಿ ಕೂದಲಿಗೆ ಹಚ್ಚಿ. 45 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ತಿಂಗಳಿಗೆ 2 ಬಾರಿ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read