HomeKarnatakaಕುಡಿದ ಅಮಲಿನಲ್ಲಿ ಬೀಡಿ ಹಚ್ಚಿಕೊಳ್ಳಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ವೃದ್ದ....!

ಕುಡಿದ ಅಮಲಿನಲ್ಲಿ ಬೀಡಿ ಹಚ್ಚಿಕೊಳ್ಳಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ವೃದ್ದ….!

ಕುಡಿದ ಅಮಲಿನಲ್ಲಿ ಬೀಡಿ ಹಚ್ಚಿಕೊಳ್ಳಲು ಹೋದ ವೃದ್ಧನೊಬ್ಬ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಾಮನಹಳ್ಳಿಯಲ್ಲಿ ನಡೆದಿದೆ.

ಚಾಮನಹಳ್ಳಿಯ 65 ವರ್ಷದ ಕೃಷ್ಣಯ್ಯ ಮೃತಪಟ್ಟ ವೃದ್ಧನಾಗಿದ್ದು, ಈತ ಭಾನುವಾರದಂದು ವಿಪರೀತ ಮದ್ಯ ಸೇವಿಸಿದ್ದು, ಬೀಡಿ ಹಚ್ಚಿಕೊಂಡು ಹಾಗೆಯೇ ಹಾಸಿಗೆ ಮೇಲೆ ಮಲಗಿದ್ದಾನೆ.

ಬೀಡಿಯ ಬೆಂಕಿ ಕಿಡಿ ಮೈಮೇಲೆ ಬಿದ್ದು ಬಳಿಕ ಹಾಸಿಗೆಗೆ ವ್ಯಾಪಿಸಿ ಬೆಂಕಿ ಹೊತ್ತಿಕೊಂಡಿದೆ. ಇದರ ಪರಿಣಾಮ ವೃದ್ಧನ ಎದೆ, ಕೈಗಳಿಗೆ ಸುಟ್ಟ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular