ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಗುಡ್‌ ನ್ಯೂಸ್: ಕೈಗೆಟುಕುವ ದರದಲ್ಲಿ 7 ಸೀಟರ್‌ SUV; ಸದ್ಯದಲ್ಲೇ ಮಾರುಕಟ್ಟೆಗೆ ಇಡಲಿದೆ ಲಗ್ಗೆ….!

ಭಾರತದಲ್ಲಿ ಎಸ್‌ಯುವಿ ಮತ್ತು 7 ಸೀಟರ್ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಅವುಗಳ ಮಾರಾಟ ಕೂಡ ಭರ್ಜರಿಯಾಗಿಯೇ ಇದೆ. ಅಗ್ಗದ 7 ಸೀಟರ್ ಕಾರುಗಳಲ್ಲಿ ಮುಂಚೂಣಿಯಲ್ಲಿರೋದು ರೆನಾಲ್ಟ್ ಟ್ರೈಬರ್. ಇದರ ಬೆಲೆ ಸುಮಾರು 6 ಲಕ್ಷದಿಂದ 8.63 ಲಕ್ಷ ರೂಪಾಯಿವರೆಗಿದೆ. ‌

ಆದರೆ ಸದ್ಯದಲ್ಲೇ ಮಾರುಕಟ್ಟೆ ಪ್ರವೇಶಿಸಲಿರುವ ಮತ್ತೊಂದು ಕಾರು ಎಲ್ಲರ ಗಮನ ಸೆಳೆಯುತ್ತಿದೆ. ಫ್ರೆಂಚ್ ಕಾರು ತಯಾರಕ ಕಂಪನಿ ಸಿಟ್ರೊಯೆನ್ ಶೀಘ್ರದಲ್ಲೇ C3 ಹ್ಯಾಚ್‌ಬ್ಯಾಕ್ ಆಧಾರಿತ ಎರಡು ಹೊಸ ಮಾದರಿಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಬರಲಿದೆ.

ವಾಸ್ತವವಾಗಿ ಸದ್ಯ ಭಾರತದಲ್ಲಿ ಸಿಗುತ್ತಿರುವ ಕಂಪನಿಯ ಅಗ್ಗದ ಕಾರೆಂದರೆ  ಸಿಟ್ರೊಯೆನ್ C3. ಇದರ ಆಧಾರದ ಮೇಲೆ ಇನ್ನೂ ಎರಡು ಕಾರುಗಳು ಭಾರತಕ್ಕೆ ಬರಲಿವೆ. ಇವುಗಳಲ್ಲಿ ಒಂದು ಅದರ ಎಲೆಕ್ಟ್ರಿಕ್ ಆವೃತ್ತಿ (eC3) ಮತ್ತು ಇನ್ನೊಂದು 7 ಆಸನಗಳ SUV ಆಗಿರುತ್ತದೆ. ಮುಂಬರುವ ವಾರಗಳಲ್ಲಿ ಸಿಟ್ರೊಯೆನ್ eC3 ಅನ್ನು ಬಿಡುಗಡೆ ಮಾಡಲಿದೆ. ಹೊಸ ಸಿಟ್ರೊಯೆನ್ 7-ಸೀಟರ್ SUV ಅನ್ನು 2023ರ ದ್ವಿತೀಯಾರ್ಧದಲ್ಲಿ ಅನಾವರಣಗೊಳಿಸಬಹುದು. ಮೂಲಗಳ ಪ್ರಕಾರ ಸಿಟ್ರೊಯೆನ್‌ನ ಈ 7 ಆಸನಗಳ SUV, ರೆನಾಲ್ಟ್ ಟ್ರೈಬರ್‌ಗೆ ಪೈಪೋಟಿ ಒಡ್ಡಲಿದೆ.

ಮಾರುತಿ ಸ್ವಿಫ್ಟ್ ಸಹ ಸರಿಸುಮಾರು ಅದೇ ಬೆಲೆಯ ಶ್ರೇಣಿಯಲ್ಲಿ ಬರುತ್ತದೆ. ಉತ್ಪಾದನೆಗೆ ಸಿದ್ಧವಾಗಿರುವ ಮಾದರಿಯನ್ನು ಸಿಟ್ರೊಯೆನ್ C3 ಏರ್‌ಕ್ರಾಸ್ ಎಂದು ಹೆಸರಿಸುವ ಸಾಧ್ಯತೆ ಇದೆ. Citroën C3 ಗಿಂತ ವಿಭಿನ್ನವಾಗಿಸಲು, ಮುಂಭಾಗದ ಗ್ರಿಲ್, ಬಂಪರ್ ಮತ್ತು ಫಾಗ್ ಲ್ಯಾಂಪ್ ಅಸೆಂಬ್ಲಿ ಸೇರಿದಂತೆ ಅದರ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗುವುದು.

ಹೊಸ SUV 1.2L, 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಮತ್ತು 1.2L, 3-ಸಿಲಿಂಡರ್ ನ್ಯಾಚುರಲಿ ಎಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್‌ಗಳನ್ನು ಪಡೆಯಬಹುದು. ಅದೇ ಎಂಜಿನ್ ಅನ್ನು C3 ಹ್ಯಾಚ್‌ಬ್ಯಾಕ್‌ನಲ್ಲಿಯೂ ನೀಡಲಾಗಿದೆ. 7-ಆಸನಗಳ SUV ಡಿಜಿಟಲ್ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 4 ಸ್ಪೀಕರ್‌ಗಳು, ಸ್ಪೀಡ್ ಸೆನ್ಸಿಟಿವ್ ಆಟೋ ಡೋರ್ ಲಾಕ್‌ಗಳು, ರೂಫ್ ರೈಲ್‌ಗಳು ಇತ್ಯಾದಿಗಳನ್ನು ಹೊಂದಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read