ಕಬ್ಬಿಣದ ಉಂಗುರ ಧರಿಸಿದ್ರೆ ಏನೆಲ್ಲ ಲಾಭವಿದೆ ಗೊತ್ತಾ….?

ಶನಿ ದೋಷವಿದ್ದರೆ ಯಾವ ಕೆಲಸದಲ್ಲೂ ಯಶಸ್ಸು ಸಿಗುವುದಿಲ್ಲ. ಆರ್ಥಿಕ ಸಮಸ್ಯೆ, ಅನಾರೋಗ್ಯ ಸಮಸ್ಯೆ ಹೀಗೆ ಒಂದಿಲ್ಲೊಂದು ಸಮಸ್ಯೆ ಕಾಡ್ತಿರುತ್ತದೆ. ಜಾತಕದಲ್ಲಿ ಸಾಡೆ ಸಾತ್ ಶನಿಯಿದ್ದರೆ ಅಥವಾ ಶನಿಯ ದೋಷವಿದ್ದರೆ ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಾಕಷ್ಟು ಪ್ರಯತ್ನ ನಡೆಯುತ್ತದೆ. ಇದರಲ್ಲಿ ಉಂಗುರ ಕೂಡ ಒಂದು. ಕಬ್ಬಿಣದ ಉಂಗುರ ಧರಿಸಿದ್ರೆ ಶನಿ ದೋಷ ಕಡಿಮೆಯಾಗುತ್ತದೆ.  ರಾಹು ಮತ್ತು ಕೇತುಗಳ ದುಷ್ಪರಿಣಾಮಗಳನ್ನು ತಪ್ಪಿಸಲು ಸಹ ಕಬ್ಬಿಣದ ಉಂಗುರವನ್ನು ಧರಿಸುತ್ತಾರೆ.

ಬಲಗೈಯ ಮಧ್ಯದ ಬೆರಳಿಗೆ ಕಬ್ಬಿಣದ ಉಂಗುರವನ್ನು ಧರಿಸಬೇಕು. ಶನಿ ಸ್ಥಾನ ಮಧ್ಯ ಬೆರಳಿನ ಅಡಿಯಲ್ಲಿದೆ. ಎಡಗೈಯ ಮಧ್ಯದ ಬೆರಳಿಗೂ ಇದನ್ನು ಧರಿಸಬಹುದು. ಶನಿವಾರ ಸಂಜೆ ಕಬ್ಬಿಣದ ಉಂಗುರವನ್ನು ಧರಿಸಬೇಕು. ರೋಹಿಣಿ, ಪುಷ್ಯ, ಅನುರಾಧ ಮತ್ತು ಉತ್ತರ ಭಾದ್ರಪದ ನಕ್ಷತ್ರಗಳಲ್ಲಿ ಕಬ್ಬಿಣದ ಉಂಗುರವನ್ನು ಧರಿಸುವುದು ಮಂಗಳಕರ.

ಆದ್ರೆ ಬುಧ, ಶುಕ್ರ ಮತ್ತು ಸೂರ್ಯ ಒಟ್ಟಿಗೆ ಇದ್ದರೆ, ಕಬ್ಬಿಣದ ಉಂಗುರವನ್ನು ಧರಿಸುವುದು ಹಾನಿಕಾರಕ.

ಜಾತಕದ 12ನೇ ಮನೆಯಲ್ಲಿ ಬುಧ ಮತ್ತು ರಾಹು ಒಟ್ಟಿಗೆ ಇದ್ದರೆ ಉಂಗುರದ ಬದಲು ಕಬ್ಬಿಣದ ಗಟ್ಟಿಯನ್ನು ಕೈಯಲ್ಲಿ ಧರಿಸಬೇಕು. ಜಾತಕದ 12 ನೇ ಮನೆ ರಾಹುಗೆ ಸೇರಿದೆ. ರಾಹುವಿನ ಸ್ಥಾನ ಸುಧಾರಿಸಲು ಕಬ್ಬಿಣದ ಉಂಗುರವನ್ನು ಧರಿಸಬೇಕು.

ಆದರೆ ಕಬ್ಬಿಣದ ಉಂಗುರವನ್ನು ಎಲ್ಲರೂ ಧರಿಸುವಂತಿಲ್ಲ. ಕೆಲವು ಜನರಿಗೆ, ಕಬ್ಬಿಣದ ಉಂಗುರ ಧರಿಸಿದ್ರೆ ಪ್ರಯೋಜನಕ್ಕಿಂತ ಹಾನಿಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read