HomeIndia'ಒಳ್ಳೆ ಫಿಗರ್' ಎನ್ನುವುದು ಲೈಂಗಿಕ ಕಿರುಕುಳ; ಸೆಷನ್ಸ್ ಕೋರ್ಟ್ ಮಹತ್ವದ ಅಭಿಪ್ರಾಯ

‘ಒಳ್ಳೆ ಫಿಗರ್’ ಎನ್ನುವುದು ಲೈಂಗಿಕ ಕಿರುಕುಳ; ಸೆಷನ್ಸ್ ಕೋರ್ಟ್ ಮಹತ್ವದ ಅಭಿಪ್ರಾಯ

ಮಹಿಳಾ ಸಹೋದ್ಯೋಗಿಗಳಿಗೆ ‘ನೀನು ಒಳ್ಳೆಯ ಫಿಗರ್, ತುಂಬಾ ಚೆನ್ನಾಗಿ ಬಾಡಿ ಮೇಂಟೇನ್ ಮಾಡಿದ್ದೀಯಾ, ನಮ್ಮೊಂದಿಗೆ ಹೊರಗೆ ಬರುತ್ತೀಯಾ’ ಎಂದು ಕರೆಯುವುದು ಲೈಂಗಿಕ ಕಿರುಕುಳಕ್ಕೆ ಸಮ ಎಂದು ಮುಂಬೈ ಸೆಶನ್ಸ್ ಕೋರ್ಟ್ ಮಹತ್ವದ ಅಭಿಪ್ರಾಯ ಪಟ್ಟಿದೆ.

ಪ್ರಕರಣದ ವಿವರ: ರಿಯಲ್ ಎಸ್ಟೇಟ್ ಕಚೇರಿ ಒಂದರಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಮಹಿಳಾ ಸಹೋದ್ಯೋಗಿಗೆ ಅಸಿಸ್ಟೆಂಟ್ ಮ್ಯಾನೇಜರ್ ಮೇಲ್ಕಂಡಂತೆ ಹೇಳಿದ್ದು, ಆತನ ವಿರುದ್ಧ ಮಹಿಳಾ ಉದ್ಯೋಗಿ ದೂರು ದಾಖಲಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗಾಗಿ ಬಂಧನದ ಭೀತಿ ಎದುರಿಸುತ್ತಿದ್ದ 42 ವರ್ಷದ ಅಸಿಸ್ಟೆಂಟ್ ಮ್ಯಾನೇಜರ್, ನಿರೀಕ್ಷಣಾ ಜಾಮೀನು ಕೋರಿ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದು, ಆದರೆ ಈ ರೀತಿ ಹೇಳಿರುವುದು ಲೈಂಗಿಕ ಕಿರುಕುಳಕ್ಕೆ ಸಮ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular