ಎಲೆಕ್ಟ್ರಿಕ್‌ ಸ್ಕೂಟರ್‌ ಆಗಿ ಬದಲಾಗಿದೆ ಹೋಂಡಾ ಆಕ್ಟಿವಾ; ಬೆಲೆ ಎಷ್ಟು ಗೊತ್ತಾ…..?

ಹೋಂಡಾ ಆಕ್ಟಿವಾ ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಸ್ಕೂಟರ್. ಕಳೆದ ಹಲವು ವರ್ಷಗಳಿಂದ ಭಾರತದ ದ್ವಿಚಕ್ರ ವಾಹನ ವಿಭಾಗವನ್ನು ಆಳುತ್ತಿದೆ. ಹೋಂಡಾ ಆಕ್ಟಿವಾದ ಎಲೆಕ್ಟ್ರಿಕ್ ಆವೃತ್ತಿಗಾಗಿ ಗ್ರಾಹಕರು ಬಹಳ ಸಮಯದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಕಂಪನಿ ಇತ್ತೀಚೆಗೆ ಹೊಸ H ಸ್ಮಾರ್ಟ್ ರೂಪಾಂತರವನ್ನು (Activa H-Smart) ಬಿಡುಗಡೆ ಮಾಡಿದೆ. ಮುಂದಿನ ವರ್ಷ ಹೋಂಡಾ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ರಸ್ತೆಗಿಳಿಸಲಿದೆ. ಎಲೆಕ್ಟ್ರಿಕ್ ಸ್ಕೂಟರ್ ಆಗಮನಕ್ಕೂ ಮುಂಚೆಯೇ, ವ್ಯಕ್ತಿಯೊಬ್ಬರು ಹೋಂಡಾ ಆಕ್ಟಿವಾವನ್ನು ಎಲೆಕ್ಟ್ರಿಕ್ ಆವೃತ್ತಿಯಾಗಿ ಪರಿವರ್ತಿಸಿದ್ದಾರೆ.

Diy Tech.in ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಕುರಿತ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಆಕ್ಟಿವಾವನ್ನು EV ಆವೃತ್ತಿಗೆ ಸುಂದರವಾಗಿ ಮಾರ್ಪಡಿಸಲಾಗಿದೆ. ಸ್ಕೂಟರ್‌ನಲ್ಲಿನ ಗ್ರಾಫಿಕ್ಸ್ ಅನ್ನು ಸಹ ಎಲೆಕ್ಟ್ರಿಕ್ ಮಾಡಲಾಗಿದೆ. ಇಲ್ಲಿ ಮಾರ್ಪಾಡು ಮಾಡಿರುವ ಸ್ಕೂಟರ್ ಹಳೆಯ ತಲೆಮಾರಿನ ಆಕ್ಟಿವಾ. ಎಲೆಕ್ಟ್ರಿಕ್ ಬ್ಯಾಟರಿಗೆ ಹೊಂದಿಕೊಳ್ಳಲು ಎಂಜಿನ್ ಅನ್ನು ಬದಲಾಯಿಸಲಾಗಿದೆ. ಹಿಂದಿನ ಚಕ್ರದಲ್ಲಿ ಮೋಟಾರ್ ಅನ್ನು ಜೋಡಿಸಲಾಗಿದೆ. ಈ ಮೋಟಾರ್ 2 ರಿಂದ 2.5 ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ. 2.88 kWh ಬ್ಯಾಟರಿಯನ್ನು ಬಳಸಲಾಗಿದೆ.

ಒಮ್ಮೆ ಚಾರ್ಜ್‌ ಮಾಡಿದರೆ ಇದು 120 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 55 ಕಿ.ಮೀ. ಇದು ಸ್ಮಾರ್ಟ್ BMS (ಬ್ಯಾಟರಿ ಮ್ಯಾನೇಜ್ಮೆಂಟ್ ಸಿಸ್ಟಮ್) ಅನ್ನು ಸಹ ಹೊಂದಿದೆ. ಸ್ಮಾರ್ಟ್ಫೋನ್ ಸಂಪರ್ಕವೂ ಈ ಸ್ಕೂಟರ್‌ಗಿದೆ. ಪಾರ್ಕಿಂಗ್ ಮೋಡ್ ಸ್ವಿಚ್ ಕೂಡ ಇದೆ.  ಎಲೆಕ್ಟ್ರಿಕ್ ಆಕ್ಟಿವಾದಲ್ಲಿನ ಅನಲಾಗ್ ಉಪಕರಣವನ್ನು ಸಂಪೂರ್ಣವಾಗಿ ಡಿಜಿಟಲ್ ಘಟಕದೊಂದಿಗೆ ಬದಲಾಯಿಸಲಾಗಿದೆ. ಎಂಜಿನ್ ಸ್ಟಾರ್ಟರ್ ಸ್ವಿಚ್ ಅನ್ನು ಹಾರ್ನ್‌ಗೆ ಬದಲಾಯಿಸಲಾಗಿದೆ. ಇದರ ಬ್ಯಾಟರಿ ವಿಭಾಗ ಮತ್ತು ಬೂಟ್ ಸ್ಪೇಸ್ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸ್ಕೂಟರ್ ಎಲೆಕ್ಟ್ರಿಕಲ್‌ ಆಗಿ ಮಾರ್ಪಡಿಸಲು ಸುಮಾರು 1 ಲಕ್ಷ ರೂಪಾಯಿ ವೆಚ್ಚವಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read