ಊದುಬತ್ತಿ ಉರಿಸುವುದರಿಂದ ಎದುರಾಗುತ್ತೆ ಈ ಸಮಸ್ಯೆ…!

ಬೆಳಿಗ್ಗೆ, ಸಂಜೆ ದೇವರ ದೀಪ ಹಚ್ಚುವಾಗ ಊದುಬತ್ತಿಯನ್ನೂ ಉರಿಸಿಡುತ್ತೀರೇ? ಇದು ದೈವಿಕ ಭಾವವನ್ನು ಮೂಡಿಸಿ ಪರಿಸರವನ್ನು ಸ್ವಚ್ಛವಾಗಿಡುತ್ತದೆ ಎಂಬುದೇನೋ ನಿಜ. ಅದರೆ ಸಂಶೋಧನೆಯೊಂದರ ಪ್ರಕಾರ ಇದರ ಉರಿಸುವಿಕೆಯಿಂದ ಹೈಡ್ರೋಕಾರ್ಬನ್ ಅಸ್ತಮಾ, ಕ್ಯಾನ್ಸರ್ ಮೊದಲಾದ ಮಾರಕ ಕಾಯಿಲೆಗಳು ಹುಟ್ಬಬಹುದು ಮತ್ತು ಕೆಮ್ಮು, ತಲೆನೋವಿನಂತ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದರಿಂದ ಬಿಡುಗಡೆಯಾಗುವ ಕಾರ್ಬನ್ ಡೈ ಆಕ್ಸೈಡ್ ಶ್ವಾಸಕೋಶದ ಒಳ ಪ್ರವೇಶಿಸಿ ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಿಂದ ಅಸ್ತಮಾದಂತ ಸಮಸ್ಯೆಗಳೂ ಉಲ್ಬಣಗೊಳ್ಳಬಹುದು. ಇದರ ನಿರಂತರ ಬಳಕೆಯಿಂದ ಕಣ್ಣುಗಳ ಅಲರ್ಜಿಯೂ ಕಾಣಿಸಿಕೊಳ್ಳಬಹುದು.

ಇದರಿಂದ ಬಿಡುಗಡೆಯಾಗುವ ಹೊಗೆಯಿಂದ ಕ್ಯಾನ್ಸರ್ ಕೋಶಗಳು ಉತ್ಪಾದನೆಯಾಗಬಹುದು. ಈ ಹೊಗೆಯಲ್ಲಿ ವಿಷಕಾರಿ ಅಂಶಗಳೊಂದಿಗೆ ಹೃದಯಕ್ಕೆ ಹಾನಿಯಾಗುವ ವಸ್ತುಗಳಿವೆ ಎಂಬುದನ್ನು ಈ ಅಧ್ಯಯನ ಖಚಿತಪಡಿಸಿದೆ. ಹಾಗಾಗಿ ಊದು ಬತ್ತಿ ಹಚ್ಚುವ ಮೊದಲು ಎಚ್ಚರ ವಹಿಸಿ. ಸಾಧ್ಯವಾದಷ್ಟು ಅದರ ಹೊಗೆಯಿಂದ ದೂರವಿರಲು ಪ್ರಯತ್ನಿಸಿ. ವಿಶೇಷ ದಿನಗಳಂದು ಮಾತ್ರ ಅಗರಬತ್ತಿ ಹಚ್ಚುವ ಪರಿಪಾಠ ಬೆಳೆಸಿಕೊಳ್ಳಿ.

ಹೆಚ್ಚು ಗಾಳಿಯಾಡುವ ಕೋಣೆಯಲ್ಲಿ ಮಾತ್ರ ಅಗರಬತ್ತಿ ಹಚ್ಚಿಡಿ. ಮಕ್ಕಳನ್ನು ವಯಸ್ಸಾದವರನ್ನು ಸಾಧ್ಯವಾದಷ್ಟು ಈ ಹೊಗೆಯಿಂದ ದೂರವಿಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read