HomeAstroಊಟ ಮಾಡುವಾಗ ಹಲ್ಲಿ ಕಣ್ಣಿಗೆ ಬಿದ್ರೆ ಏನು ಅರ್ಥ ಗೊತ್ತಾ......?

ಊಟ ಮಾಡುವಾಗ ಹಲ್ಲಿ ಕಣ್ಣಿಗೆ ಬಿದ್ರೆ ಏನು ಅರ್ಥ ಗೊತ್ತಾ……?

ಪ್ರಪಂಚದಾದ್ಯಂತ ಮನೆ, ಅಂಗಡಿ, ಕಚೇರಿ ಸೇರಿದಂತೆ ಎಲ್ಲ ಕಡೆ ಹಲ್ಲಿಗಳಿರುತ್ತವೆ. ಹಲ್ಲಿ ಈಗ ಸಾಮಾನ್ಯ ಎನ್ನುವಂತಾಗಿದೆ. ಹಲ್ಲಿ ಓಡಿಸಲು ಜನರು ಸಾಕಷ್ಟು ಪ್ರಯತ್ನಗಳನ್ನೂ ಮಾಡ್ತಾರೆ. ಶಾಸ್ತ್ರದಲ್ಲಿ ಹಲ್ಲಿಗೆ ಸಂಬಂಧಿಸಿದಂತೆ ಕೆಲ ಶುಭ-ಅಶುಭ ಸಂಕೇತಗಳನ್ನು ಹೇಳಲಾಗಿದೆ. ಯಾವ ಕೆಲಸ ಮಾಡುವಾಗ ಹಲ್ಲಿ ಕಂಡ್ರೆ ಶುಭ ಹಾಗೂ ಯಾವುದು ಅಶುಭ ಎಂಬುದನ್ನೂ ಹೇಳಲಾಗಿದೆ.

ಹಲ್ಲಿಗಳು ಸಂಭೋಗ ನಡೆಸುತ್ತಿರುವ ಸ್ಥಿತಿಯಲ್ಲಿ ಕಂಡ್ರೆ ಶುಭಕರ. ವ್ಯಕ್ತಿಯ ಹಳೆ ಸ್ನೇಹಿತರ ಭೇಟಿ ಶೀಘ್ರವೇ ಆಗಲಿದೆ ಎಂದರ್ಥ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎರಡು ಹಲ್ಲಿಗಳು ಜಗಳವಾಡ್ತಿರುವುದನ್ನು ನೋಡಿದ್ರೆ ಅಶುಭ. ಶೀಘ್ರದಲ್ಲೇ ನಿಮ್ಮ ಆಪ್ತರು ಅಥವಾ ಪ್ರೇಮಿ ಜೊತೆ ಜಗಳವಾಗಲಿದೆ ಎಂದರ್ಥ. ಹಾಗೆ ವಿವಾದ ದೊಡ್ಡದಾಗಲಿದೆ ಎಂಬ ಸಂಕೇತ.

ಊಟ ಮಾಡುವ ವೇಳೆ ಹಲ್ಲಿ ನಿಮ್ಮ ಕಣ್ಣಿಗೆ ಬಿದ್ರೆ ಬಹಳ ಶುಭ ಸಂಕೇತ. ಮುಂದೆ ಒಳ್ಳೆಯದಾಗಲಿದೆ ಎಂದರ್ಥ.

ಹೊಸ ಮನೆ ಖರೀದಿ ಮಾಡಿದ್ದು, ಮನೆಗೆ ಪ್ರವೇಶ ಮಾಡ್ತಿದ್ದಂತೆ ಸತ್ತ ಹಲ್ಲಿ ಕಣ್ಣಿಗೆ ಬಿದ್ರೆ ಅಶುಭ ಸಂಕೇತ. ಆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಿದೆ ಎಂದುಕೊಳ್ಳಿ. ಜನರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕುಟುಂಬಸ್ಥರು ಪದೇ ಪದೇ ಅನಾರೋಗ್ಯಕ್ಕೀಡಾಗ್ತಾರೆ.

For Latest News Updates, Join Our Whatsapp Community🚩
RELATED ARTICLES

Most Popular