ಈ ರಾಶಿಯ ವ್ಯಾಪಾರಿಗಳಿಗೆ ಮತ್ತು ಉದ್ಯೋಗಿಗಳಿಗೆ ಇಂದು ಸಮಯ ಅನುಕೂಲಕರವಾಗಿದೆ

ಮೇಷ ರಾಶಿ

ಇಂದು ನಿಮಗೆ ಶುಭ ದಿನ. ಆಲೋಚನೆಗಳು ಶೀಘ್ರವಾಗಿ ಬದಲಾಗುತ್ತವೆ. ಮನಸ್ಸಿನಲ್ಲಿ ಗೊಂದಲ ಉಂಟಾಗುತ್ತದೆ. ಹಾಗಾಗಿ ಯಾವುದೇ ಮಹತ್ವದ ನಿರ್ಣಯ ಕೈಗೊಳ್ಳಬೇಡಿ.

ವೃಷಭ ರಾಶಿ

ಆಲೋಚನೆಗಳಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಪ್ರಯತ್ನಿಸಿ. ಯಡವಟ್ಟು ತೀರ್ಮಾನಗಳಿಂದ ನಿಮಗೆ ದೊರೆತ ಅವಕಾಶ ಕೊನೆ ಕ್ಷಣದಲ್ಲಿ ಕೈತಪ್ಪಿ ಹೋಗಬಹುದು.

ಮಿಥುನ ರಾಶಿ

ಇವತ್ತು ನಿಮ್ಮ ಮನಃಸ್ಥಿತಿ ತ್ರಿಶಂಕು ಸ್ಥಿತಿಯಲ್ಲಿರುತ್ತದೆ. ಹಾಗಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಜಾಗ್ರತೆ ವಹಿಸಿ. ಕುಟುಂಬದವರೊಂದಿಗೆ ಜಗಳವಾಗುವ ಸಾಧ್ಯತೆ ಇದೆ.

ಕರ್ಕ ರಾಶಿ

ಇವತ್ತು ನಿಮಗೆ ಲಾಭದಾಯಕ ದಿನ. ಮಿತ್ರರು ಅದರಲ್ಲೂ ಸ್ತ್ರೀ ಮಿತ್ರರಿಂದ ಲಾಭವಾಗಲಿದೆ. ಯಾವುದಾದರೂ ಸುಂದರ ಸ್ಥಳಕ್ಕೆ ಸುತ್ತಾಡಲು ತೆರಳಲಿದ್ದೀರಿ.

ಸಿಂಹ ರಾಶಿ

ಇಂದು ನಿಮಗೆ ಶುಭ ದಿನ. ಹೊಸ ಕಾರ್ಯದ ಆಯೋಜನೆ ಪೂರ್ಣಗೊಳ್ಳಲಿದೆ. ವ್ಯಾಪಾರಿಗಳಿಗೆ ಮತ್ತು ಉದ್ಯೋಗಿಗಳಿಗೆ ಸಮಯ ಅನುಕೂಲಕರವಾಗಿದೆ.

ಕನ್ಯಾ ರಾಶಿ

ವ್ಯವಹಾರದಲ್ಲಿ ಲಾಭವಾಗುವ ಸಾಧ್ಯತೆ ಇದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ ಹೆಚ್ಚಾಗಿ ದೊರೆಯುವುದಿಲ್ಲ. ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.

ತುಲಾ ರಾಶಿ

ಇಂದು ಅತ್ಯಂತ ಸಮಾಧಾನ ಮತ್ತು ಶಾಂತಿಯಿಂದಿರಿ. ಹೊಸ ಕಾರ್ಯದಲ್ಲಿ ಯಶಸ್ಸು ಸಿಗುವುದಿಲ್ಲ. ಹಾಗಾಗಿ ಇಂದು ಯಾವುದೇ ಹೊಸ ಕಾರ್ಯಕ್ಕೆ ಚಾಲನೆ ನೀಡಬೇಡಿ.

ವೃಶ್ಚಿಕ ರಾಶಿ

ಇಂದು ಆನಂದವಾಗಿ ದಿನ ಕಳೆಯಲಿದ್ದೀರಿ. ಮನರಂಜನೆಯಿಂದ ಮನಸ್ಸು ಪ್ರಸನ್ನವಾಗುತ್ತದೆ. ಪ್ರಿಯ ವ್ಯಕ್ತಿಯನ್ನು ಭೇಟಿ ಮಾಡಲಿದ್ದೀರಿ.

ಧನು ರಾಶಿ

ವ್ಯಾಪಾರವನ್ನು ವಿಸ್ತರಿಸಲು ಇಂದು ಶುಭದಿನ. ವ್ಯವಹಾರ ಕೂಡ ನಿಮ್ಮ ಲೆಕ್ಕಾಚಾರದಂತೆ ನಡೆಯುತ್ತದೆ. ಹಣಕಾಸಿನ ಕೊಡು- ಕೊಳ್ಳುವಿಕೆಯಲ್ಲೂ ಯಶಸ್ಸು ಸಿಗುತ್ತದೆ.

ಮಕರ ರಾಶಿ

ನಿಮ್ಮ ಮಾತು ಮತ್ತು ವರ್ತನೆಯಲ್ಲಿ ಅತ್ಯಂತ ವೇಗವಾಗಿ ಪರಿವರ್ತನೆ ಆಗುತ್ತದೆ. ಬೌದ್ಧಿಕ ಚರ್ಚೆಯಲ್ಲಿ ತೊಡಗಿಕೊಳ್ಳಲಿದ್ದೀರಿ. ಬರವಣಿಗೆಯಿಂದ ಮನಸ್ಸಿಗೆ ಆನಂದ ದೊರೆಯುತ್ತದೆ.

ಕುಂಭ ರಾಶಿ

ನಿಮ್ಮಲ್ಲಿ ಇಂದು ಸ್ಪೂರ್ತಿ ಮತ್ತು ಉತ್ಸಾಹದ ಕೊರತೆ ಎದ್ದು ಕಾಣುತ್ತದೆ. ಕುಟುಂಬದವರೊಂದಿಗೆ ವಾದ-ವಿವಾದದಲ್ಲಿ ತೊಡಗಬೇಡಿ. ಕೋಪ ಮತ್ತು ಮಾತನ್ನು ನಿಯಂತ್ರಿಸಿಕೊಳ್ಳಿ.

ಮೀನ ರಾಶಿ

ಲಕ್ಷ್ಮಿಯ ಕೃಪೆ ಇಂದು ನಿಮ್ಮ ಮೇಲಿರುತ್ತದೆ. ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಸುಂದರ ವಸ್ತ್ರ, ಆಭರಣಗಳು ಕೂಡ ದೊರೆಯಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read