HomeAstroಈ ರಾಶಿಯವರಿಗಿದೆ ಇಂದು ಲಾಭದಾಯಕ ದಿನ

ಈ ರಾಶಿಯವರಿಗಿದೆ ಇಂದು ಲಾಭದಾಯಕ ದಿನ

ಮೇಷ ರಾಶಿ

ಮನಸ್ಸಿನ ಏಕಾಗ್ರತೆ ಕಡಿಮೆಯಾಗಿರುತ್ತದೆ. ಹಣವನ್ನು ಹೂಡಿಕೆ ಮಾಡುವವರು ಜಾಗರೂಕರಾಗಿರಿ. ಅತ್ಯಂತ ಅವಶ್ಯಕ ದಾಖಲೆಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ.

ವೃಷಭ ರಾಶಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವ್ಯಾವಹಾರಿಕ ಕಾರ್ಯಗಳನ್ನು ಪೂರ್ಣಗೊಳಿಸಲು ಇಂದು ಶುಭ ದಿನ. ಮನಸ್ಸಿನಲ್ಲಿ ಗೊಂದಲದಿಂದಾಗಿ ದೃಢ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆರೋಗ್ಯ ಕೊಂಚ ಏರುಪೇರಾಗಿರುತ್ತದೆ.

ಮಿಥುನ ರಾಶಿ

ಪ್ರೇಮದ ಸುಖಮಯ ಅನುಭವ ಪ್ರಾಪ್ತವಾಗಲಿದೆ. ಆರ್ಥಿಕ, ಸಾಮಾಜಿಕ ಮತ್ತು ಕೌಟುಂಬಿಕ ದೃಷ್ಟಿಯಿಂದ ಇಂದು ಲಾಭದಾಯಕ ದಿನ. ಗೃಹಸ್ಥ ಜೀವನ ಸುಖಮಯವಾಗಿರುತ್ತದೆ.

ಕರ್ಕ ರಾಶಿ

ಇಂದು ಅನುಕೂಲಕರ ಹಾಗೂ ಲಾಭದಾಯಕ ದಿನ. ಹಿರಿಯ ಅಧಿಕಾರಿಗಳ ಕೃಪೆಯಿಂದ ಪ್ರಗತಿಯ ಮಾರ್ಗದಲ್ಲಿ ಸಾಗುತ್ತೀರಿ. ವ್ಯಾಪಾರದಲ್ಲೂ ಆದಾಯ ವೃದ್ಧಿಸಲಿದೆ. ಬಾಕಿ ವಸೂಲಿ ಮಾಡಲಿದ್ದೀರಿ.

ಸಿಂಹ ರಾಶಿ

ಇಂದು ಇಡೀ ದಿನ ನಿಮ್ಮ ಮೂಡ್ ಚೆನ್ನಾಗಿರುತ್ತದೆ. ಆತ್ಮೀಯರೊಂದಿಗೆ ರುಚಿಕರ ಭೋಜನ ಸವಿಯಲಿದ್ದೀರಿ. ಸಂಗಾತಿಯೊಂದಿಗಿನ ಸಂಬಂಧ ಮಧುರವಾಗಿರುತ್ತದೆ.

ಕನ್ಯಾ ರಾಶಿ

ವ್ಯಾಪಾರಿಗಳಿಗೆ ಇಂದು ಶುಭ ದಿನ. ವ್ಯಾಪಾರ ವೃದ್ಧಿ ಜೊತೆಗೆ ಯಶಸ್ಸು ಕೂಡ ಸಿಗಲಿದೆ. ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆ. ಹಿರಿಯರು ಮತ್ತು ತಂದೆಯಿಂದ ಲಾಭವಿದೆ.

ತುಲಾ ರಾಶಿ

ಇವತ್ತಿನ ದಿನ ಪ್ರತಿಕೂಲತೆಯಿಂದ ಕೂಡಿರುತ್ತದೆ. ಯಾವುದೇ ಹೊಸ ಕಾರ್ಯವನ್ನು ಆರಂಭಿಸಬೇಡಿ. ಯಾವುದೇ ಶಸ್ತ್ರಚಿಕಿತ್ಸೆಯನ್ನು ಇಂದು ಮಾಡಿಸಿಕೊಳ್ಳಬೇಡಿ.

ವೃಶ್ಚಿಕ ರಾಶಿ

ಇಂದು ಸಾಹಿತ್ಯದ ಬಗ್ಗೆ ಹೆಚ್ಚು ಆಸಕ್ತಿ ಮೂಡಲಿದೆ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ. ದೃಢ ಮನೋಬಲ ಹಾಗೂ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ.

ಧನು ರಾಶಿ

ಶಾರೀರಿಕ ಮತ್ತು ಮಾನಸಿಕ ಚಿಂತೆಯಿಂದಾಗು ಮನಸ್ಸು ವ್ಯಗ್ರವಾಗಿರುತ್ತದೆ. ಯಾರೊಂದಿಗೂ ಜಗಳ ಮಾಡಬೇಡಿ. ದಾಂಪತ್ಯ ಬದುಕಿನಲ್ಲಿ ಸಮಸ್ಯೆ ಉಂಟಾಗಬಹುದು.

ಮಕರ ರಾಶಿ

ಇಂದು ನಿಮಗೆ ಶುಭ ದಿನ. ಹೊಸ ಕಾರ್ಯದ ಆಯೋಜನೆ ಯಶಸ್ವಿಯಾಗಲಿದೆ. ವ್ಯಾಪಾರಿಗಳಿಗೆ ಲಾಭದಾಯಕ ದಿನ. ಪದೋನ್ನತಿ ಸಿಗುವ ಸಾಧ್ಯತೆ ಇದೆ.

ಕುಂಭ ರಾಶಿ

ಆನಂದ ಮತ್ತು ಉಲ್ಲಾಸದಿಂದ ದಿನ ಕಳೆಯಲಿದ್ದೀರಿ. ವ್ಯಾಪಾರದಲ್ಲಿ ಲಾಭವಾಗಲಿದೆ, ಆದಾಯ ಹೆಚ್ಚುತ್ತದೆ. ಮಿತ್ರರ ಭೇಟಿಯಿಂದ ಸಂತಸಗೊಳ್ಳಲಿದ್ದೀರಿ. ವಿವಾಹ ಉತ್ಸುಕರಿಗೆ ಮದುವೆ ಯೋಗವಿದೆ.

ಮೀನ ರಾಶಿ

ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಯಲಿದೆ. ಮನೆಯಲ್ಲಿ ಆನಂದದ ವಾತಾವರಣವಿರುತ್ತದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

For Latest News Updates, Join Our Whatsapp Community🚩
RELATED ARTICLES

Most Popular