HomeAstroಈ ರಾಶಿಯವರಿಗಿದೆ ಇಂದು ಧಾರ್ಮಿಕ ಸ್ಥಳಕ್ಕೆ ಪ್ರವಾಸ ಆಯೋಜನೆ ಮಾಡುವ ಸಾಧ್ಯತೆ

ಈ ರಾಶಿಯವರಿಗಿದೆ ಇಂದು ಧಾರ್ಮಿಕ ಸ್ಥಳಕ್ಕೆ ಪ್ರವಾಸ ಆಯೋಜನೆ ಮಾಡುವ ಸಾಧ್ಯತೆ

ಮೇಷ ರಾಶಿ

ಇವತ್ತು ನಿಮಗೆ ಶುಭದಿನ. ವಿಚಾರದಲ್ಲಿ ಶೀಘ್ರ ಪರಿವರ್ತನೆಯಾಗಲಿದೆ. ಮಹತ್ವಪೂರ್ಣ ವಿಷಯದಲ್ಲಿ ಅಂತಿಮ ನಿರ್ಣಯ ತೆಗೆದುಕೊಳ್ಳುವುದು ಸುಲಭವಲ್ಲ. ಹಾಗಾಗಿ ಮಹತ್ವದ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಡಿ.

ವೃಷಭ ರಾಶಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದು ಮನಸ್ಸಿನ ಸ್ಥಿರತೆ ಕಾಪಾಡಿಕೊಳ್ಳಿ. ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿ ಎದುರಾಗಬಹುದು. ಅವಕಾಶ ಕಳೆದುಕೊಳ್ಳುವ ಸಾಧ್ಯತೆ ಇದೆ. ಯಾವುದೇ ಹೊಸ ಕಾರ್ಯವನ್ನು ಪ್ರಾರಂಭಿಸಬೇಡಿ.

ಮಿಥುನ ರಾಶಿ

ಲಕ್ಷ್ಮಿಯ ಕೃಪೆ ನಿಮ್ಮ ಮೇಲಿದೆ. ಆರ್ಥಿಕ ಲಾಭವಾಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಖರ್ಚು ಅಧಿಕವಾಗದಂತೆ ಎಚ್ಚರ ವಹಿಸಿ. ರುಚಿಕರ ಉಪಹಾರ ದೊರೆಯಲಿದೆ.

ಕರ್ಕ ರಾಶಿ

ಮನಸ್ಸು ತ್ರಿಶಂಕು ಸ್ಥಿತಿಯಲ್ಲಿದೆ, ಯಾವುದೇ ಮಹತ್ವಪೂರ್ಣ ನಿರ್ಣಯ ತೆಗೆದುಕೊಳ್ಳಬೇಡಿ. ಸಂಬಂಧಿಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಕುಟುಂಬದ ಕೆಲಸಗಳಿಗಾಗಿ ಹಣ ಖರ್ಚಾಗಲಿದೆ.

ಸಿಂಹ ರಾಶಿ

ಇವತ್ತು ನಿಮ್ಮ ಪಾಲಿಗೆ ಲಾಭದಾಯಕ ದಿನ. ಸ್ನೇಹಿತರು ಮತ್ತು ಸ್ತ್ರೀ ಮಿತ್ರರಿಂದ ಲಾಭವಿದೆ. ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ಚಿಂತನೆಯಲ್ಲೇ ಹೆಚ್ಚು ಸಮಯ ಕಳೆಯಲಿದ್ದೀರಿ. ವ್ಯಾಪಾರದಲ್ಲಿ ಆರ್ಥಿಕ ಲಾಭದ ಯೋಗವಿದೆ.

ಕನ್ಯಾ ರಾಶಿ

ಇವತ್ತಿನ ದಿನ ಶುಭಫಲವಿದೆ. ಹೊಸ ಕಾರ್ಯದ ಆಯೋಜನೆ ಯಶಸ್ವಿಯಾಗಲಿದೆ. ಉದ್ಯಮಿಗಳು ಮತ್ತು ಉದ್ಯೋಗಿಗಳಿಗೆ ಸಮಯ ಉತ್ತಮವಾಗಿದೆ. ವ್ಯಾಪಾರದಲ್ಲಿ ಲಾಭ ಮತ್ತು ಪದೋನ್ನತಿಯ ಯೋಗವಿದೆ.

ತುಲಾ ರಾಶಿ

ಉದ್ಯಮದಲ್ಲೂ ಲಾಭವಾಗುವ ಸಾಧ್ಯತೆ ಇದೆ. ನೌಕರಿ ಮತ್ತು ವ್ಯಾಪಾರದಲ್ಲಿ ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ. ದೀರ್ಘ ಪ್ರಯಾಣ ಅಥವಾ ಧಾರ್ಮಿಕ ಸ್ಥಳಕ್ಕೆ ಪ್ರವಾಸ ಆಯೋಜನೆ ಮಾಡುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ

ಇವತ್ತು ಶಾಂತಿ ಮತ್ತು ಸಮಾಧಾನದಿಂದ ಸಮಯ ಕಳೆಯಿಲಿದ್ದೀರಿ. ಹೊಸ ಕಾರ್ಯದಲ್ಲಿ ಸಫಲತೆ ಸಿಗುವುದಿಲ್ಲ. ಹಾಗಾಗಿ ಯಾವುದೇ ಹೊಸ ಕಾರ್ಯ ಆರಂಭಿಸಬೇಡಿ. ಕೋಪದ ಮೇಲೆ ಸಂಯಮ ಇಟ್ಟುಕೊಳ್ಳಿ.

ಧನು ರಾಶಿ

ಇವತ್ತು ಆನಂದಪೂರ್ವಕವಾಗಿ ಸಮಯ ಕಳೆಯಲಿದ್ದೀರಿ. ಮನರಂಜನೆಯಿಂದ ಮನಸ್ಸು ಪ್ರಫುಲ್ಲವಾಗಲಿದೆ. ಮಿತ್ರರ ಜೊತೆಗೆ ಪ್ರವಾಸ, ಪ್ರಯಾಣ ಆಯೋಜನೆ ಮಾಡುವ ಸಾಧ್ಯತೆ ಇದೆ. ಸಹಯೋಗದಿಂದ ಲಾಭವಿದೆ.

ಮಕರ ರಾಶಿ

ವ್ಯಾಪಾರದಲ್ಲಿ ಅಭಿವೃದ್ಧಿಯಿಂದ ಇವತ್ತಿನ ದಿನ ಬಹಳ ಲಾಭದಾಯಕವಾಗಲಿದೆ. ಉದ್ಯಮದಲ್ಲಿ ನೀವು ಅಂದುಕೊಂಡಂತೆ ಕೆಲಸಗಳು ನಡೆಯುತ್ತವೆ. ಹಣಕಾಸು ವ್ಯವಹಾರ ಯಶಸ್ವಿಯಾಗಲಿದೆ.

ಕುಂಭ ರಾಶಿ

ನಿಮ್ಮ ಮಾತು ಮತ್ತು ವಿಚಾರದಲ್ಲಿ ಶೀಘ್ರ ಪರಿವರ್ತನೆಯಾಗಲಿದೆ. ಬೌದ್ಧಿಕ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದೀರಿ. ಬರವಣಿಗೆ ಮತ್ತು ಸೃಜನಾತ್ಮಕ ಕೆಲಸದಲ್ಲಿ ತೊಡಗಿಕೊಳ್ಳುತ್ತೀರಿ. ಆಕಸ್ಮಿಕವಾಗಿ ಹಣ ಖರ್ಚಾಗುವ ಸಾಧ್ಯತೆಯಿದೆ. ಆರೋಗ್ಯ ಹದಗೆಡಬಹುದು.

ಮೀನ ರಾಶಿ

ನಿಮ್ಮಲ್ಲಿ ಉತ್ಸಾಹ ಮತ್ತು ಸ್ಪೂರ್ತಿಯ ಕೊರತೆ ಕಾಣಲಿದೆ. ಸಂಬಂಧಿಕರೊಂದಿಗೆ ವಿವಾದಗಳಲ್ಲಿ ತೊಡಗಿಕೊಳ್ಳಬೇಡಿ. ಉದ್ಯೋಗದಲ್ಲಿ ಸಮಸ್ಯೆ ಎದುರಾಗಲಿದೆ. ಹಣ ಮತ್ತು ಗೌರವಕ್ಕೆ ಧಕ್ಕೆ ಬರದಂತೆ ಎಚ್ಚರ ವಹಿಸಿ.

For Latest News Updates, Join Our Whatsapp Community🚩
RELATED ARTICLES

Most Popular