HomeAstroಈ ರಾಶಿಯವರಿಗಿದೆ ಇಂದು ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭ ಪ್ರಾಪ್ತಿ ಯೋಗ

ಈ ರಾಶಿಯವರಿಗಿದೆ ಇಂದು ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭ ಪ್ರಾಪ್ತಿ ಯೋಗ

ಮೇಷ ರಾಶಿ

ಇಂದು ಕೋಪವನ್ನು ನಿಯಂತ್ರಿಸಿಕೊಳ್ಳುವುದು ಅತ್ಯಂತ ಅವಶ್ಯಕ. ಯಾವುದೇ ಕೆಲಸ ಅಥವಾ ಸಂಬಂಧ ನಿಮ್ಮ ಕೋಪದಿಂದಾಗಿಯೇ ಹದಗೆಡಬಹುದು. ಶರೀರದಲ್ಲಿ ಸ್ಪೂರ್ತಿಯ ಅಭಾವವಿರುತ್ತದೆ.

ವೃಷಭ ರಾಶಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಸ್ಪೂರ್ತಿ ಮತ್ತು ಪ್ರಫುಲ್ಲತೆಯ ಅನುಭವವಾಗಲಿದೆ. ಸ್ನೇಹಿತರು ಮತ್ತು ಬಂಧುಗಳೊಂದಿಗೆ ಪ್ರವಾಸಕ್ಕೆ ತೆರಳಲಿದ್ದೀರಿ.

ಮಿಥುನ ರಾಶಿ

ಕೆಲಸದಲ್ಲಿ ಯಶಸ್ಸು ಸಿಗುವುದು ವಿಳಂಬವಾಗುತ್ತದೆ. ಶಾರೀರಿಕ ಅಸ್ವಸ್ಥತೆ ಉಂಟಾಗಲಿದೆ. ಇದರಿಂದ ನಿಮ್ಮ ಮನಸ್ಸಿನಲ್ಲಿ ಹತಾಶೆ ಮೂಡಬಹುದು. ಕೆಲಸದ ಒತ್ತಡ ಹೆಚ್ಚಾಗಿರುತ್ತದೆ.

ಕರ್ಕ ರಾಶಿ

ಇಂದು ನಿಮಗೆ ಖುಷಿ ಮತ್ತು ಯಶಸ್ಸು ದೊರೆಯುತ್ತದೆ. ಕುಟುಂಬ ಸದಸ್ಯರೊಂದಿಗೆ ಸುಖ-ಶಾಂತಿಯಿಂದ ದಿನ ಕಳೆಯಲಿದ್ದೀರಿ. ಉದ್ಯೋಗಿಗಳಿಗೆ ಲಾಭವಾಗಲಿದೆ.

ಸಿಂಹ ರಾಶಿ

ಬರವಣಿಗೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡಲಿದ್ದೀರಿ. ವಿದ್ಯಾರ್ಥಿಗಳು ಓದಿನಲ್ಲಿ ಒಳ್ಳೆ ಸಾಧನೆ ಮಾಡುತ್ತಾರೆ. ಪ್ರೇಮ ಪ್ರಣಯದ ವಿಷಯದಲ್ಲೂ ಯಶಸ್ಸು ಸಿಗಲಿದೆ. ಪ್ರಿಯ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ.

ಕನ್ಯಾ ರಾಶಿ

ಇಂದು ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಪ್ರತಿಕೂಲತೆಯ ಅನುಭವವಾಗಲಿದೆ. ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಮನಸ್ಸು ಕೂಡ ಚಿಂತಾಗ್ರಸ್ಥವಾಗಿರುತ್ತದೆ.

ತುಲಾ ರಾಶಿ

ಮಂಗಳ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗಿ ಬರುತ್ತದೆ. ವಿದೇಶದಿಂದ ಶುಭ ಸಮಾಚಾರ ಬರಲಿದೆ.

ವೃಶ್ಚಿಕ ರಾಶಿ

ಕುಟುಂಬದಲ್ಲಿ ಜಗಳ ಮತ್ತು ದ್ವೇಷದ ವಾತಾವರಣ ಮೂಡದಂತೆ ಎಚ್ಚರ ವಹಿಸಿ. ಕುಟುಂಬ ಸದಸ್ಯರಲ್ಲಿ ತಪ್ಪು ತಿಳುವಳಿಕೆ ಮೂಡಬಹುದು. ಮನಸ್ಸಿನಲ್ಲಿ ಮೂಡುವ ನಕಾರಾತ್ಮಕ ಭಾವನೆಗಳನ್ನು ದೂರ ಮಾಡಿ.

ಧನು ರಾಶಿ

ಇಂದು ನಿಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಆರ್ಥಿಕ ಲಾಭ ಕೂಡ ದೊರೆಯಬಹುದು. ಕೌಟುಂಬಿಕ ಸಮಸ್ಯೆಗಳು ಪರಿಹಾರವಾಗುತ್ತವೆ.

ಮಕರ ರಾಶಿ

ಇಂದು ಅತ್ಯಂತ ಸಮಾಧಾನದಿಂದಿರಿ. ಹೆಚ್ಚು ಪರಿಶ್ರಮಪಟ್ಟರೂ ಯಶಸ್ಸು ಸುಲಭವಾಗಿ ದೊರೆಯುವುದಿಲ್ಲ. ಇದರಿಂದ ನಿರಾಸೆ ಆವರಿಸಬಹುದು. ಮನೆಯಲ್ಲೂ ಅಶಾಂತಿಯ ವಾತಾವರಣವಿರುತ್ತದೆ.

ಕುಂಭ ರಾಶಿ

ಇಂದು ಹೊಸ ಕಾರ್ಯವನ್ನು ಆರಂಭಿಸುವಲ್ಲಿ ಯಶಸ್ವಿಯಾಗುತ್ತೀರಾ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭ ಪ್ರಾಪ್ತಿಯಾಗಲಿದೆ. ಅಂದುಕೊಂಡ ಕಾರ್ಯ ಕೈಗೂಡಲಿದೆ.

ಮೀನ ರಾಶಿ

ನೌಕರಿ ಮತ್ತು ವ್ಯಾಪಾರದಲ್ಲಿ ಯಶಸ್ಸು ಸಿಗುತ್ತದೆ. ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ ಸಿಗಲಿದೆ. ಇದರಿಂದ ಅತ್ಯಂತ ಪ್ರಸನ್ನತೆಯ ಅನುಭವವಾಗಲಿದೆ.

For Latest News Updates, Join Our Whatsapp Community🚩
RELATED ARTICLES

Most Popular