ಈ ನಗರದಲ್ಲಿ ವೈದ್ಯರ ಸಂಬಳ 6.56 ಕೋಟಿ ರೂಪಾಯಿ; ಇದರ ಹಿಂದಿದೆ ಈ ಕಾರಣ

ವೈದ್ಯರು ದೇವರ ಸಮಾನ ಅನ್ನೋ ಮಾತಿದೆ. ಇದಕ್ಕೆ ತಕ್ಕಂತಹ ಗೌರವ ಆಸ್ಟ್ರೇಲಿಯಾದ ನಗರವೊಂದರ ಡಾಕ್ಟರ್‌ಗಳಿಗೆ ಸಿಗುತ್ತಿದೆ. ಇಲ್ಲಿ ವೈದ್ಯರಿಗೆ 6.56 ಕೋಟಿ ರೂಪಾಯಿ ಸಂಬಳ ನೀಡಲಾಗುತ್ತಿದೆ. ಜೊತೆಗೆ ವಾಸಕ್ಕೆ 4 ಬೆಡ್‌ರೂಮ್‌ಗಳ ಮನೆಯನ್ನೂ ಕೊಡಲಾಗುತ್ತಿದೆ.

ಕ್ವೈರಾಡಿಂಗ್ ಹೆಸರಿನ ಈ ನಗರ  ಪಶ್ಚಿಮ ಆಸ್ಟ್ರೇಲಿಯಾದ ವೀಟ್‌ಬೆಲ್ಟ್ ಪ್ರದೇಶದಲ್ಲಿದೆ. ಇಲ್ಲಿಗೆ ತೆರಳಲು ಪರ್ತ್‌ನಿಂದ ಪೂರ್ವಕ್ಕೆ ಸುಮಾರು ಎರಡು ಗಂಟೆ  ಪ್ರಯಾಣ ಮಾಡಬೇಕು. ಈ ಪಟ್ಟಣದಲ್ಲಿ ಖಾಯಂ ನಿವಾಸಿ ವೈದ್ಯಾಧಿಕಾರಿಗಾಗಿ ಹುಡುಕಾಟ ನಡೆಯುತ್ತಲೇ ಇದೆ. ಇಲ್ಲಿ ಕರ್ತವ್ಯ ನಿರ್ವಹಿಸಲು ಬಯಸುವ ಯಾವುದೇ ವೈದ್ಯರಿಗೆ 6.56 ಕೋಟಿ ರೂಪಾಯಿ ಪಾವತಿಸಲು ನಗರ ಸಭೆ ನಿರ್ಧರಿಸಿದೆ.

ವೈದ್ಯರಿಗೆ ಸಂಬಳದ ಜೊತೆಗೆ ಬೋನಸ್

ವೈದ್ಯರೊಂದಿಗೆ ಕೆಲಸ ಮಾಡಲು ಸಿಬ್ಬಂದಿಯನ್ನೂ ನೀಡಲಾಗುತ್ತದೆ. ಅವರ ವೆಚ್ಚಗಳನ್ನು ಕೂಡ ನಗರಸಭೆಯೇ ಭರಿಸುತ್ತದೆ. ಉತ್ತಮ ಸಂಬಳದ ಜೊತೆಗೆ ವೈದ್ಯರಿಗೆ ಬೋನಸ್ ಮತ್ತು ಇತರ ಪ್ರೋತ್ಸಾಹಕಗಳು ಸಹ ಲಭ್ಯವಿದೆ. ವೈದ್ಯರು ಎರಡು ವರ್ಷಕ್ಕಿಂತ ಹೆಚ್ಚು ಕಾಲ ಈ ನಗರದಲ್ಲಿ  ಉಳಿಯಲು ನಿರ್ಧರಿಸಿದರೆ, ಐದು ವರ್ಷಗಳಿಗಿಂತ ಹೆಚ್ಚು ಸಮಯ ಕರ್ತವ್ಯ ನಿರ್ವಹಿಸಿದರೆ ಹೆಚ್ಚುವರಿಯಾಗಿ 30 ಲಕ್ಷ ರೂಪಾಯಿ ಸಿಗುತ್ತದೆ. ವೀಟ್‌ಬೆಲ್ಟ್ ಪಟ್ಟಣದಲ್ಲಿ ಕೇವಲ 619 ನಿವಾಸಿಗಳಿದ್ದಾರೆ. ವಸತಿ ವೈದ್ಯರನ್ನು ಹುಡುಕಲು ಹೆಣಗಾಡುತ್ತಿರುವ ಗ್ರಾಮೀಣ ಸಮುದಾಯಗಳಲ್ಲಿ ಇದು ಕೂಡ ಒಂದಾಗಿದೆ.

ಆಸ್ಟ್ರೇಲಿಯಾದ ಸಣ್ಣ ಪಟ್ಟಣಗಳಲ್ಲಿ ವೈದ್ಯರ ಕೊರತೆಯಿದೆ. ಕೆಲವು ಕಡೆ ಡಾಕ್ಟರ್‌ಗಳೇ ಇಲ್ಲದೆ ವೈದ್ಯಕೀಯ ಕೇಂದ್ರದ ಬಾಗಿಲು ಮುಚ್ಚುವ ಸ್ಥಿತಿ ಬಂದಿದೆ. ಹಾಗಾಗಿ ವೈದ್ಯರನ್ನು ಆಕರ್ಷಿಸಲು ಕೈತುಂಬಾ ಸಂಬಳ ಮತ್ತು ಬೋನಸ್‌ ಆಫರ್‌ ನೀಡಲಾಗುತ್ತಿದೆ. ಆಸ್ಟ್ರೇಲಿಯಾದ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಕೇವಲ 14 ಪ್ರತಿಶತದಷ್ಟು ಮಂದಿ ಮಾತ್ರ ಸಾಮಾನ್ಯ ವೈದ್ಯರಾಗಿ ವೃತ್ತಿಜೀವನವನ್ನು ಮುಂದುವರಿಸಲು ಬಯಸುತ್ತಾರೆ. ಕೇವಲ 4.5 ಪ್ರತಿಶತದಷ್ಟು ವೈದ್ಯರು ಸಣ್ಣ ಪಟ್ಟಣದಲ್ಲಿ ಕೆಲಸ ಮಾಡಲು ಸಿದ್ಧರಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read