ಈ ಒಂದು ರಾಶಿಯವರು ಕೈಗೆ ಕೆಂಪು ದಾರ ಧರಿಸಿದ್ರೆ ಒಲಿಯಲಿದೆ ಅದೃಷ್ಟ

ಕೈಗೆ ಬಣ್ಣ ಬಣ್ಣದ ದಾರಗಳನ್ನು ಎಲ್ಲರೂ ಕಟ್ಟಿಕೊಳ್ತಾರೆ. ಪುಣ್ಯ ಸ್ಥಳಗಳಿಗೆ ಹೋಗಿ ಬಂದವರ ಕೈನಲ್ಲಿ ಸಾಮಾನ್ಯವಾಗಿ ಕೆಂಪು ಅಥವಾ ಕಪ್ಪು ದಾರ ಇದ್ದೇ ಇರುತ್ತದೆ. ಬಹುತೇಕ ಯುವಕರು ಫ್ಯಾಷನ್ ಗಾಗಿಯೂ ಕೆಂಪು, ಕಪ್ಪು ದಾರವನ್ನು ಕಟ್ಟಿಕೊಳ್ತಾರೆ. ಈ ಕೆಂಪು ದಾರ ಪ್ರೀತಿ ಹೆಚ್ಚಿಸುವ ಜೊತೆಗೆ ಆರ್ಥಿಕ ವೃದ್ಧಿಗೆ ಕಾರಣವಾಗುತ್ತೆ ಎಂಬುದು ನಿಮಗೆ ಗೊತ್ತಾ?

ಎಲ್ಲರೂ ಕೆಂಪು ದಾರವನ್ನು ಕೈಗೆ ಕಟ್ಟಿಕೊಂಡ್ರೆ ಪ್ರೀತಿ ಜೊತೆ ಆರ್ಥಿಕ ವೃದ್ಧಿಯಾಗುವುದಿಲ್ಲ. ಒಂದು ರಾಶಿಯವರಿಗೆ ಮಾತ್ರ ಯಶಸ್ಸು ಸಿಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಆ ರಾಶಿಯ ಜನರು ಕೈಗೆ ಕೆಂಪು ಬಣ್ಣದ ದಾರ ಕಟ್ಟಿಕೊಂಡ್ರೆ ಅದೃಷ್ಟ ಮನೆ ಬಾಗಿಲಿಗೆ ಬಂತು ಎಂದರ್ಥ.

ಅಷ್ಟಕ್ಕೂ ಕೆಂಪು ದಾರ ಶುಭವಾಗಿರುವ ರಾಶಿ ಮಿಥುನ. ಶಾಸ್ತ್ರಗಳ ಪ್ರಕಾರ ಮಿಥುನ ರಾಶಿಯವರು ಕೈಗೆ ಕೆಂಪು ದಾರ ಕಟ್ಟಿಕೊಂಡ್ರೆ ಜೀವನದಲ್ಲಿ ಉನ್ನತಿಗೆ ಹೊಸ ಹೊಸ ಮಾರ್ಗಗಳು ತೆರೆದುಕೊಳ್ತವೆ.

ಅವಕಾಶಗಳು ಅವ್ರನ್ನು ಅರಸಿ ಬರುತ್ತವೆ. ನಿಂತ ಕೆಲಸ ಕೈಗೂಡುತ್ತದೆ. ಎಲ್ಲ ದೋಷಗಳು ನಿವಾರಣೆಯಾಗುತ್ತದೆ. ಮಿಥುನ ರಾಶಿಯವರು ಕೆಂಪು ದಾರವನ್ನು ಕೈಗೆ ಕಟ್ಟಿಕೊಂಡ್ರೆ ಆದಷ್ಟು ಬೇಗ ನಿಜವಾದ ಪ್ರೀತಿ ಸಿಗುತ್ತದೆಯಂತೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರು ಕೆಂಪು ದಾರವನ್ನು ಮತ್ತು ಕೆಂಪು ಬಟ್ಟೆ ಧರಿಸುವುದು ಹೆಚ್ಚು ಶುಭವಂತೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read