ಈ ಒಂದು ಕಾರಣಕ್ಕೆ ಕೇವಲ 24 ಗಂಟೆಯಲ್ಲಿ 11 ಮಿಲಿಯನ್ ಫಾಲೋವರ್ಸ್ ಕಳೆದುಕೊಂಡಿದ್ದರು ರೊನಾಲ್ಡೊ ಮಾಜಿ ಗೆಳತಿ…!

ನೀವು ಸಾಮಾಜಿಕ ಖಾತೆಗಳನ್ನು ಹೊಂದಿದ್ದರೆ, ನಿಮಗೆ ಫಾಲೋವರ್ಸ್ ಹೆಚ್ಚಾಗುವುದು ಅಥವಾ ಫಾಲೋವರ್ಸ್ ಗಳನ್ನು ಕಳೆದುಕೊಳ್ಳೋದರ ಬಗ್ಗೆ ಗೊತ್ತೇ ಇರುತ್ತದೆ. ಆದರೆ 24 ಗಂಟೆಯಲ್ಲಿ 11 ಮಿಲಿಯನ್ ಗಿಂತಲೂ ಹೆಚ್ಚು ಫಾಲೋವರ್ಸ್ ಕಳೆದುಕೊಂಡ ಬಗ್ಗೆ ಕೇಳಿದ್ರೆ ಅಚ್ಚರಿಯಾಗುತ್ತೆ ಅಲ್ವೇ?.

ಒಂದು ಕಾಲದಲ್ಲಿ ಪೋರ್ಚುಗಲ್ ನ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಜೊತೆ ಡೇಟಿಂಗ್ ಮಾಡ್ತಿದ್ದ ರಷ್ಯಾದ ಮಾಡೆಲ್, ಐರಿನಾ ಶೇಕ್ ಒಂದೇ ದಿನ 11 ಮಿಲಿಯನ್ ಗಿಂತ ಹೆಚ್ಚು ಫಾಲೋವರ್ಸ್ ಗಳನ್ನು ತನ್ನ ಇನ್ ಸ್ಟಾಗ್ರಾಂ ಖಾತೆಯಿಂದ ಕಳೆದುಕೊಂಡಿದ್ದರು. 2010- 2015ರವರೆಗೆ ರೊನಾಲ್ಡೊ ಮತ್ತು ಐರಿನಾ ಶೇಕ್ ಸಂಬಂಧದಲ್ಲಿದ್ದರು.

ಅನೇಕ ಕಾರ್ಯಕ್ರಮ ಮತ್ತು ಮ್ಯಾಗಜಿನ್ ಗಳಲ್ಲಿ ಮಿಂಚಿದ್ದ ಈ ಜೋಡಿ 2015ರಲ್ಲಿ ದೂರವಾಯಿತು. ನಂತರ ಐರಿನಾ ಶೇಕ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ರೊನಾಲ್ಡೊ ಜೊತೆಗಿದ್ದ ಫೋಟೋಗಳನ್ನು ತೆಗೆದು ಹಾಕಲು ಪ್ರಾರಂಭಿಸಿದರು. ನಂತರ ತಮ್ಮ ಅನುಯಾಯಿಗಳಿಗೆ ನೇರವಾಗಿ ಸಂದೇಶವೊಂದನ್ನು ತಿಳಿಸಿ, ನೀವು ನನ್ನನ್ನು ಕ್ರಿಸ್ಟಿಯಾನೋ ರೊನಾಲ್ಡೊ ಅವರ ಮಾಜಿ ಗೆಳತಿ ಎಂದು ಮಾತ್ರ ತಿಳಿದಿದ್ದರೆ ನನ್ನ ಖಾತೆಯನ್ನು ಅನ್ ಫಾಲೋ ಮಾಡಬಹುದು ಎಂದು ತಿಳಿಸಿದ್ದರು.

ತಕ್ಷಣವೇ 24 ಗಂಟೆಯೊಳಗೆ ಐರಿನಾ ಶೇಕ್ ಅವರ ಖಾತೆಯಿಂದ 11 ಮಿಲಿಯನ್ ಅನುಯಾಯಿಗಳು ಹೊರನಡೆದರು. ಈ ಮೂಲಕ ಆಕೆಯ ಅಭಿಮಾನಿಗಳ ಸಂಖ್ಯೆಯಲ್ಲಿ 75% ಕುಸಿತವಾಯಿತು.

ರೊನಾಲ್ಡೊಯಿಂದ ಬೇರ್ಪಟ್ಟ ಸ್ವಲ್ಪ ಸಮಯದ ನಂತರ ಐರಿನಾ ಶೇಕ್, ನಟ ಮತ್ತು ಚಲನಚಿತ್ರ ನಿರ್ಮಾಪಕ ಬ್ರಾಡ್ಲಿ ಕೂಪರ್ ಅವರೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಅವರೊಂದಿಗೆ ಲಿಯಾ ಡಿ ಸೀನ್ ಎಂಬ ಮಗಳನ್ನು ಪಡೆದರು. ನಂತರ ಜೂನ್ 2019 ರಲ್ಲಿ ಕೂಪರ್ ಮತ್ತು ಶೇಕ್ ಬೇರ್ಪಟ್ಟರು. ಸದ್ಯ ಐರಿನಾ ಶೇಕ್ 22 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹೊಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read