HomeAutoಈವರೆಗೆ 2.5 ಕೋಟಿ ವಾಹನ ಮಾರಾಟ ಮಾಡಿದ ಮಾರುತಿ ಸುಜುಕಿ...!

ಈವರೆಗೆ 2.5 ಕೋಟಿ ವಾಹನ ಮಾರಾಟ ಮಾಡಿದ ಮಾರುತಿ ಸುಜುಕಿ…!

1983ರ ಡಿಸೆಂಬರ್ ನಲ್ಲಿ ತನ್ನ ಉತ್ಪನ್ನದ ಮೊದಲ ಕಾರು ಮಾರುತಿ 800 ಬಿಡುಗಡೆ ಮಾಡುವ ಮೂಲಕ ಭಾರತದಲ್ಲಿ ಕಾಲೂರಿದ್ದ ಮಾರುತಿ ಸುಜುಕಿ ಇಲ್ಲಿಯವರೆಗೆ ಬರೋಬ್ಬರಿ 2.5 ಕೋಟಿ ವಾಹನಗಳನ್ನು ಮಾರಾಟ ಮಾಡಿದ ಹೆಗ್ಗಳಿಕೆ ಹೊಂದಿದೆ.

ಸುಜುಕಿ ಕಂಪನಿಯು ಮಾರುತಿ ಉದ್ಯೋಗ್ ಜೊತೆ ಪಾಲುದಾರಿಕೆಯೊಂದಿಗೆ ಮೊದಲಿಗೆ ಆರಂಭವಾಗಿದ್ದು, ಈಗ ಮಾರುತಿ ಸುಜುಕಿ ಇಂಡಿಯಾ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮಾರುತಿ ಸುಜುಕಿ ಒಟ್ಟು 17 ಮಾದರಿಯ ಕಾರುಗಳನ್ನು ದೇಶದಲ್ಲಿ ತಯಾರಿಸಿ ಮಾರಾಟ ಮಾಡುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2012ರ ಫೆಬ್ರವರಿಯಲ್ಲಿ ಒಂದು ಕೋಟಿ ಕಾರುಗಳನ್ನು ಮಾರಾಟ ಮಾಡಿದ ಮೈಲಿಗಲ್ಲು ತಲುಪಿದ್ದು, 2019ರಲ್ಲಿ ಎರಡು ಕೋಟಿ ಕಾರುಗಳನ್ನು ಮಾರಾಟ ಮಾಡಿದ ಮೈಲಿಗಲ್ಲು ತಲುಪಿತ್ತು. ಇದೀಗ 2023ರ ಜನವರಿ 9ಕ್ಕೆ ಒಟ್ಟು 2.5 ಕೋಟಿ ವಾಹನಗಳನ್ನು ಮಾರಾಟ ಮಾಡಿದ ಮೈಲಿಗಲ್ಲು ತಲುಪಿದೆ.

For Latest News Updates, Join Our Whatsapp Community🚩
RELATED ARTICLES

Most Popular