
ಭದ್ರಾವತಿ ನಗರದ ಹೊಸ ಬುಳ್ಳಾಪುರ ವಾಸಿ 25 ವರ್ಷದ ರತಿಲಾ ಕುಮಾರ್ ನಾಪತ್ತೆಯಾದವರಾಗಿದ್ದು, ಶುಕ್ರವಾರದಂದು ಇವರು ಸಿರಿಯೂರು ಬಳಿಯ ಭದ್ರಾ ಚಾನೆಲ್ ಗೆ ತೆರಳಿದ್ದರು.
ಇವರು ಈಜಲು ಮುಂದಾದ ವೇಳೆ ಸ್ನೇಹಿತರು ಬೇಡವೆಂದರೂ ಸಹ ಕೇಳಲಿಲ್ಲ ಎನ್ನಲಾಗಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಶುಕ್ರವಾರ ಸಂಜೆಯವರೆಗೂ ಅವರು ಪತ್ತೆಯಾಗಿರಲಿಲ್ಲ.

