ಇಲ್ಲಿ ನೀರಿಗಿಂತ ಕಡಿಮೆ ಬೆಲೆಗೆ ಸಿಗುತ್ತದೆ ಪ್ರೀಮಿಯಂ ವಿಸ್ಕಿ ಮತ್ತು  ಬಿಯರ್; ಬೆಲೆ ನೋಡಿ ನೆಟ್ಟಿಗರಿಗೆ ಶಾಕ್….!‌

ಬಾರ್‌, ಪಬ್‌ ಮತ್ತು ಹೋಟೆಲ್‌ಗಳಲ್ಲಿ ಪ್ರೀಮಿಯಂ ವಿಸ್ಕಿ ಅಥವಾ ಬಿಯರ್‌ಗೆ ಸಾಕಷ್ಟು ವೆಚ್ಚವಾಗುತ್ತದೆ. ಕನಿಷ್ಠ ಅಂದ್ರೂ ಸಾವಿರ-ಎರಡು ಸಾವಿರ ರೂಪಾಯಿವರೆಗೆ ಬಿಲ್ ಮಾಡಲಾಗುತ್ತದೆ. ಹೀಗಿರುವಾಗ ನೀರಿಗಿಂತ ಕಡಿಮೆ ಬೆಲೆಗೆ ಒಂದು ಪೆಗ್ ಮದ್ಯ ಸಿಕ್ಕರೆ ಪಾನಪ್ರಿಯರಿಗೆ ಖುಷಿ ಹೇಳತೀರದು. ಅಗ್ಗದ ಬೆಲೆಯಲ್ಲಿ ಮದ್ಯ ಸಿಗ್ತಾ ಇರುವ ಬಗ್ಗೆ ಬಿಲ್‌ ಒಂದು ಆನ್‌ಲೈನ್‌ನಲ್ಲಿ ವೈರಲ್‌ ಆಗಿದೆ. ಇದು ನೌಕಾಪಡೆಯ ಅಧಿಕಾರಿಗಳ ಮೆಸ್‌ನ ಮೆನು. ಇದರಲ್ಲಿ ಮದ್ಯದ ಬೆಲೆಗಳು ಇಂಟರ್ನೆಟ್ ಬಳಕೆದಾರರನ್ನು ಅಚ್ಚರಿಯಲ್ಲಿ ಮುಳುಗಿಸಿವೆ.

ಯಾವುದೇ ಸಮಾರಂಭ ಅಥವಾ ಪಾರ್ಟಿಯಲ್ಲಿ ಹೆಚ್ಚಿನವರು ಮದ್ಯ ಸೇವಿಸುತ್ತಾರೆ. ಆಲ್ಕೋಹಾಲ್‌ ಇಲ್ಲದೇ ಇದ್ರೆ ಪಾರ್ಟಿ ಅಪೂರ್ಣ ಎಂಬಂತ ಸ್ಥಿತಿಯಿದೆ. ಕೆಲವರು ಮನೆಯಲ್ಲೇ ಇಂಟ್ರೆಸ್ಟಿಂಗ್‌ ಆಗಿರೋ ಕಾಕ್ಟೇಲ್‌ಗಳನ್ನು ತಯಾರಿಸ್ತಾರೆ. ಇನ್ನು ಕೆಲವರು ತಮ್ಮ ನೆಚ್ಚಿನ ಪಾನೀಯಗಳನ್ನು ಆನಂದಿಸಲು ರೆಸ್ಟೋರೆಂಟ್‌, ಬಾರ್‌, ಪಬ್‌ಗಳಿಗೆ ಹೋಗ್ತಾರೆ. ಅಲ್ಲೆಲ್ಲಾ ಮದ್ಯ ಸಾಕಷ್ಟು ದುಬಾರಿಯಾಗಿರುತ್ತದೆ. ಆದರೆ ನೌಕಾಪಡೆಯ ಅಧಿಕಾರಿಗಳಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಮದ್ಯ ಸಿಗುತ್ತದೆ. ಅನಂತ್ ಎಂಬ ಟ್ವಿಟರ್ ಬಳಕೆದಾರರೊಬ್ಬರು ಮೆನುವಿನ ಫೋಟೋವನ್ನು ಶೇರ್‌ ಮಾಡಿದ್ದಾರೆ.

ಬ್ರಾಂಡೆಟ್‌ ವಿಸ್ಕಿ ಮತ್ತು ಬಿಯರ್‌ ಅತ್ಯಂತ ಕಡಿಮೆ ಬೆಲೆಗೆ ಇಲ್ಲಿ ಲಭ್ಯವಿದೆ. ಬಹುತೇಕ ಮದ್ಯದ ಬೆಲೆ 100 ರೂಪಾಯಿಗಿಂತಲೂ ಕಡಿಮೆಯಿದೆ. ಬೆಲೆ ಕಡಿಮೆಯಾಗಲು ಕಾರಣ ಸೇನಾ ಸಿಬ್ಬಂದಿಗೆ ಕೇಂದ್ರೀಯ ಅಬಕಾರಿ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಅದಕ್ಕಾಗಿಯೇ ಮಿಲಿಟರಿ ಕ್ಯಾಂಟೀನ್‌ಗಳಲ್ಲಿ ಮದ್ಯ ಮತ್ತು ದಿನಸಿ ಕನಿಷ್ಠ ಶೇ.10-15ರಷ್ಟು ಅಗ್ಗವಾಗಿದೆ.

https://twitter.com/AnantNoFilter/status/1621888526131552258?ref_src=twsrc%5Etfw%7Ctwcamp%5Etweetembed%7Ctwterm%5E1621888526131552258%7Ctwgr%5E8dbc6373d1beb1a89de84cc312377a45bed7301c%7Ctwcon%5Es1_&ref_url=https%3A%2F%2Fzeenews.india.com%2Fhindi%2Foff-beat%2Fpremium-whiskey-at-a-lower-price-than-water-beer-price-even-more-shocking-this-menu-will-surprise-you%2F1560668

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read