HomeIndiaಇದೇ ಮೊದಲ ಬಾರಿಗೆ ಕೇವಲ 87 ನಿಮಿಷಗಳಲ್ಲಿ ಬಜೆಟ್ ಭಾಷಣ ಮುಗಿಸಿದ ನಿರ್ಮಲಾ ಸೀತಾರಾಮನ್...!

ಇದೇ ಮೊದಲ ಬಾರಿಗೆ ಕೇವಲ 87 ನಿಮಿಷಗಳಲ್ಲಿ ಬಜೆಟ್ ಭಾಷಣ ಮುಗಿಸಿದ ನಿರ್ಮಲಾ ಸೀತಾರಾಮನ್…!

ಇದೇ ಮೊದಲ ಬಾರಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅತಿ ಕಡಿಮೆ ಸಮಯದಲ್ಲಿ ತಮ್ಮ ಬಜೆಟ್ ಭಾಷಣ ಮುಗಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ತಮ್ಮ ಐದನೇ ಬಜೆಟ್ ಭಾಷಣವನ್ನು 90 ನಿಮಿಷಗಳೊಳಗೆ ಪೂರ್ಣಗೊಳಿಸಿದ್ದಾರೆ.

ಕೇವಲ 87 ನಿಮಿಷಗಳಲ್ಲಿ ಬಜೆಟ್ ಭಾಷಣ ಮುಗಿಸಿದ ಅವರ ಭಾಷಣ ಇದುವರೆಗಿನ ಅವರ ಬಜೆಟ್ ಭಾಷಣಗಳಲ್ಲೇ ಅತಿ ಚಿಕ್ಕದಾಗಿದೆ.

ಕಳೆದ ವರ್ಷ ಅವರ ಬಜೆಟ್ ಭಾಷಣ 92 ನಿಮಿಷಗಳಲ್ಲಿ ಪೂರ್ಣಗೊಂಡಿತ್ತು. ಇದುವರೆಗೆ 92 ನಿಮಿಷದ ಆ ಭಾಷಣ ಕಡಿಮೆ ಸಮಯದ ಭಾಷಣ ಎಂಬ ದಾಖಲೆಯನ್ನು ಹೊಂದಿತ್ತು. 2021 ರಲ್ಲಿ, ಅವರು 1 ಗಂಟೆ 50 ನಿಮಿಷಗಳ ಕಾಲ ಮಾತನಾಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2020 ರಲ್ಲಿ ಅವರು ಭಾರತದ ಇತಿಹಾಸದಲ್ಲಿ 2 ಗಂಟೆ 40 ನಿಮಿಷಗಳಲ್ಲಿ ಸುದೀರ್ಘ ಬಜೆಟ್ ಭಾಷಣ ಮಾಡಿದ ಎಲ್ಲಾ ದಾಖಲೆಗಳನ್ನು ಮುರಿದರು.

For Latest News Updates, Join Our Whatsapp Community🚩
RELATED ARTICLES

Most Popular