HomeBeautyಆರೋಗ್ಯದ ಜೊತೆ ಚರ್ಮದ ಸೌಂದರ್ಯ ಕಾಪಾಡುತ್ತೆ ʼಕರ್ಬೂಜʼ ಹಣ್ಣು

ಆರೋಗ್ಯದ ಜೊತೆ ಚರ್ಮದ ಸೌಂದರ್ಯ ಕಾಪಾಡುತ್ತೆ ʼಕರ್ಬೂಜʼ ಹಣ್ಣು

ಬೇಸಿಗೆಯಲ್ಲಿ ಸೇವಿಸಲೇಬೇಕಾದ ಹಣ್ಣು ಅಂದರೆ ಅದು ಕರ್ಬೂಜ. ಕರ್ಬೂಜ ಹಣ್ಣು ದೇಹವನ್ನು ತಂಪಾಗಿಸುತ್ತದೆ, ಬಾಯಾರಿಕೆ ನೀಗಿಸುತ್ತದೆ, ಆಯಾಸ ಪರಿಹರಿಸುತ್ತದೆ ಅನ್ನುವುದು ಎಲ್ಲರಿಗೂ ತಿಳಿದಿದೆ.

ಆದರೆ ಈ ಹಣ್ಣಿನಿಂದ ಚರ್ಮದ ರಕ್ಷಣೆಯನ್ನು ಮಾಡಿಕೊಳ್ಳಬಹುದು. ಚರ್ಮದ ಹಲವು ಸಮಸ್ಯೆಗಳಿಗೆ ಕರ್ಬೂಜ ಹಣ್ಣಿನಿಂದ ಹೇಗೆ ಪರಿಹಾರ ಕಂಡುಕೊಳ್ಳಬಹುದು ಅಂತ ತಿಳಿಯಿರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*  ಕಾಲು ಕಪ್ ಕರ್ಬೂಜ ಹಣ್ಣಿನ ತಿರುಳು ಹಾಗೂ ಹಾಲಿನ ಕೆನೆಗೆ ಚಿಟಿಕೆ ಅರಿಶಿಣ ಸೇರಿಸಿ ಮುಖಕ್ಕೆ ಲೇಪಿಸಿಕೊಂಡು ಅರ್ಧ ಗಂಟೆ ನಂತರ ತೊಳೆದರೆ ಚರ್ಮ ಕಾಂತಿಯುತವಾಗುತ್ತದೆ.

* ಕರ್ಬೂಜ ಹಣ್ಣಿನ ತಿರುಳಿಗೆ ಎಳನೀರು ಸೇರಿಸಿ ಕುತ್ತಿಗೆ, ಕೈ, ಕಾಲುಗಳಿಗೆ ಮಸಾಜ್ ಮಾಡಿಕೊಂಡು ಅರ್ಧ ಗಂಟೆಯ ನಂತರ ಶುಚಿಗೊಳಿಸಿಕೊಂಡರೆ ಒಣ ಚರ್ಮ ಮೆರಗು ಪಡೆದುಕೊಳ್ಳುತ್ತದೆ.

* ಕರ್ಬೂಜ ಹಣ್ಣಿನ ಬೀಜಗಳನ್ನು ನೀರಿನಲ್ಲಿ ಕುದಿಸಿ, ತಣಿಸಿ, ಶೋಧಿಸಿ ಕುಡಿದರೆ ಚರ್ಮದ ಸಮಸ್ಯೆಗಳು ನಿವಾರಣೆಯಾಗುತ್ತದೆ.

* ತಲಾ ಕಾಲು ಕಪ್ ಕರ್ಬೂಜ ಹಣ್ಣಿನ ತಿರುಳು, ಬಾಳೆಹಣ್ಣು ಹಾಗೂ ಪಪ್ಪಾಯ ಹಣ್ಣಿನ ತಿರುಳುಗಳನ್ನು ಸಮ ಪ್ರಮಾಣದಲ್ಲಿ ಸೇರಿಸಿ ಮುಖಕ್ಕೆ ಲೇಪಿಸಿದರೆ ಕಪ್ಪು ಕಲೆಗಳು ದೂರವಾಗುತ್ತವೆ.

* ದಿನಕ್ಕೆರಡು ಬಾರಿ ಕರ್ಬೂಜ ರಸವನ್ನು ನಿಯಮಿತವಾಗಿ ಕುಡಿಯುವುದರಿಂದ ಕಜ್ಜಿ, ಗಜಕರ್ಣ ಮುಂತಾದ ಚರ್ಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

For Latest News Updates, Join Our Whatsapp Community🚩
RELATED ARTICLES

Most Popular