HomeBusinessಆಭರಣ ಪ್ರಿಯರಿಗೆ ಬಿಗ್ ಶಾಕ್; ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ

ಆಭರಣ ಪ್ರಿಯರಿಗೆ ಬಿಗ್ ಶಾಕ್; ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ

ಹಳದಿ ಲೋಹ ಚಿನ್ನದ ಮೇಲೆ ಭಾರತೀಯರಿಗೆ ಬಲು ವ್ಯಾಮೋಹ. ಜೊತೆಗೆ ಆಪತ್ಕಾಲದಲ್ಲಿ ಇದು ನೆರವಿಗೆ ಬರುತ್ತದೆ ಎಂಬ ಕಾರಣಕ್ಕೆ ಚಿನ್ನದ ಮೇಲೆ ಹೂಡಿಕೆ ಮಾಡಲು ಬಹುತೇಕರು ಮುಂದಾಗುತ್ತಾರೆ.

ಇದೀಗ ಚಿನ್ನಾಭರಣ ಪ್ರಿಯರಿಗೆ ಬ್ಯಾಡ್ ನ್ಯೂಸ್ ಒಂದು ಇಲ್ಲಿದೆ. ಬುಧವಾರದಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1,090 ರೂಪಾಯಿ ಏರಿಕೆಯಾಗುವ ಮೂಲಕ 57,942 ರೂಪಾಯಿಗಳಿಗೆ ಮಾರಾಟವಾಗಿದೆ.

ಬೆಳ್ಳಿ ಬೆಲೆಯಲ್ಲೂ ಕೆಜಿಗೆ 1,947 ರೂಪಾಯಿ ಏರಿಕೆಯಾಗುವ ಮೂಲಕ 67,950 ತಲುಪಿದೆ. ಅಂತರಾಷ್ಟ್ರೀಯ ಬೆಲೆಗಳಿಗೆ ಅನುಗುಣವಾಗಿ ಚಿನ್ನದ ಬೆಲೆಯಲ್ಲಿ ಈ ಏರಿಕೆ ಕಂಡು ಬಂದಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular