HomeKarnatakaಆಂಟಿ ಜೊತೆ ಹೋಗಿದ್ದ ಲವರ್ ಬಾಯ್ ಪೊಲೀಸ್ ಠಾಣೆಗೆ ಹಾಜರು..!

ಆಂಟಿ ಜೊತೆ ಹೋಗಿದ್ದ ಲವರ್ ಬಾಯ್ ಪೊಲೀಸ್ ಠಾಣೆಗೆ ಹಾಜರು..!

ಬೆಂಗಳೂರು: ಇತ್ತೀಚೆಗೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಗಂಡ ಕಾಣಿಸುತ್ತಿಲ್ಲ ಅಂತ ದೂರು ದಾಖಲು ಮಾಡಿದ್ದರು. ಅಷ್ಟೆ ಅಲ್ಲ ಕೆಳಗಿನ ಮನೆ ಆಂಟಿ ಜೊತೆ ಓಡಿ ಹೋಗಿರಬಹುದೆಂಬ ಗುಮಾನಿ ಕೂಡ ಇತ್ತು. ಆದರೆ ಈಗ ಮಹಿಳೆಯ ಗಂಡ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಅದೂ ವಕೀಲರ ಜೊತೆ.

ಹೌದು, ನವೀದ್ ಎಂಬಾತ ಕೆಳಗಿನ ಮನೆಯಲ್ಲಿಯೇ ವಾಸವಿದ್ದ ಶಾಜಿಯ ಎಂಬವರ ಜೊತೆ ಹೋಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈತ ಈಗ ಪೊಲೀಸ್ ಠಾಣೆಗೆ ವಕೀಲರೊಟ್ಟಿಗೆ ಬಂದು ಹೇಳಿಕೆ ಕೊಟ್ಟಿದ್ದಾರೆ. ನಾನು ನನ್ನ ಕೆಲಸದ ಮೇಲೆ ಹೊರಗೆ ಹೋಗಿದ್ದೆ ಶಾಜಿಯಾ ಜೊತೆ ಹೋಗಿಲ್ಲ ಎಂದು ಹೇಳಿದ್ದಾರೆ. ಇತ್ತ ಪೊಲೀಸ್ ಠಾಣೆಗೆ ಈತ ಬರ್ತಾ ಇದ್ದಂತೆ. ಅತ್ತ ಶಾಜಿಯಾ ತನ್ನ ಗಂಡ ಮುಬಾರಕ್ ಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ.

ಇನ್ನು ನವೀದ್, ಪತ್ನಿ ಝೀನತ್ ಜೊತೆ ಹೋಗಿಲ್ಲ. ಹೀಗಾಗಿ ಝೀನತ್ ಪೊಲೀಸರ ಮೇಲೆ ಆರೋಪ ಮಾಡಿದ್ದಾರೆ. ಗಂಡನನ್ನು ನನ್ನ ಜೊತೆ ಕಳುಹಿಸಬೇಕಿತ್ತು. ಆದರೆ ವಕೀಲರೊಟ್ಟಿಗೆ ಕಳುಹಿಸಿದ್ದಾರೆ ಎಂದಿದ್ದಾರೆ. ಇನ್ನು ನವೀದ್ ಪೊಲೀಸ್ ಠಾಣೆಗೆ ಬರೋದಿಕ್ಕೂ, ಅತ್ತ ಶಾಜಿಯ ತನ್ನ ಗಂಡನಿಗೆ ಡಿವೋರ್ಸ್ ನೋಟಿಸ್ ಕಳಿಸೋದಿಕ್ಕು ತಾಳೆಯಾಗ್ತಾ ಇದ್ದು, ಇಬ್ಬರು ಒಟ್ಟಿಗೆ ಇರಬಹುದು ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ‌.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular