HomeKarnatakaಅದೆಲ್ಲ ಗೊತ್ತಿಲ್ಲ ಕಾಂಗ್ರೆಸ್ ಗೆ ವೋಟು ಹಾಕಿ ಗೆಲ್ಲಿಸಿ ಎಂದ ಜೆಡಿಎಸ್ ಶಾಸಕರು: ವಿಡಿಯೋ ವೈರಲ್

ಅದೆಲ್ಲ ಗೊತ್ತಿಲ್ಲ ಕಾಂಗ್ರೆಸ್ ಗೆ ವೋಟು ಹಾಕಿ ಗೆಲ್ಲಿಸಿ ಎಂದ ಜೆಡಿಎಸ್ ಶಾಸಕರು: ವಿಡಿಯೋ ವೈರಲ್

ಜೆಡಿಎಸ್‌ಗೆ ಶಾಕ್‌ - ʼಕೈʼ ಅಭ್ಯರ್ಥಿಗೆ ವೋಟ್‌ ಹಾಕಿ ಎಂದ MLC ಭೋಜೇಗೌಡಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಅಂತಿಮಗೊಂಡಿರುವ ಕಾರಣ ಇಂದಿನಿಂದ ಚುನಾವಣಾ ಕಣ ರಂಗೇರಿದೆ. ಮೂರೂ ಪ್ರಮುಖ ಪಕ್ಷಗಳಿಗೆ ಬಂಡಾಯದ ಬಿಸಿ ತಟ್ಟಿದ್ದು, ಇದರ ಮಧ್ಯೆಯೂ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ನಾಯಕರು ಕಸರತ್ತು ನಡೆಸುತ್ತಿದ್ದಾರೆ.

ಇದರ ಮಧ್ಯೆ ಜೆಡಿಎಸ್ ಶಾಸಕರೊಬ್ಬರು ತಮ್ಮ ಪಕ್ಷದ ಅಭ್ಯರ್ಥಿ ಕಣದಲ್ಲಿದ್ದರೂ ಸಹ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಅವರನ್ನು ಗೆಲ್ಲಿಸಿಕೊಂಡು ಬನ್ನಿ ಎಂದು ಹೇಳಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕುತೂಹಲ ಮೂಡಿಸಿದೆ.

ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ತಮ್ಮ ಪಕ್ಷದ ಕಾರ್ಯಕರ್ತರೊಬ್ಬರ ಮನೆಯಲ್ಲಿ ನಡೆದ ಸಭೆ ವೇಳೆ ಮಾತನಾಡಿ, ಅದೆಲ್ಲ ಗೊತ್ತಿಲ್ಲ. ನೀವೆಲ್ಲಾ ಸೇರಿ ಕಾಂಗ್ರೆಸ್ ಗೆ ವೋಟು ಹಾಕಿ ಗೆಲ್ಲಿಸಿ. ಮಿಕ್ಕಿದ್ದು ಆಮೇಲೆ ನೋಡಿಕೊಳ್ಳೋಣ ಎನ್ನುವ ಮೂಲಕ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಸೂಚಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular