ಈಶಾನ್ಯ ಭಾಗದಲ್ಲಿ ಒಂದು ಕಾಗದದೊಳಗೆ ಉಪ್ಪನ್ನು ಹಾಕಿಡಿ ಚಮತ್ಕಾರ ನೋಡಿ

ಸಾಕಷ್ಟು ಪ್ರಯತ್ನದ ನಂತ್ರವೂ ಧನ ಕೈನಲ್ಲಿ ನಿಲ್ಲೋದಿಲ್ಲ. ಪದೇ ಪದೇ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಅಂತವರು ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಕೆಲವೊಂದು ಸುಲಭ ಉಪಾಯಗಳನ್ನು ಅನುಸರಿಸಬೇಕು. ಇದ್ರಿಂದ ಧನ ವೃದ್ಧಿ ಜೊತೆಗೆ ಸುಖ-ಶಾಂತಿ ನಿಮ್ಮದಾಗುತ್ತದೆ.

ಅಶೋಕ ಮರದ ಬೇರನ್ನು ಕತ್ತರಿಸಿ ಪೂಜೆ ಮಾಡುವ ಸ್ಥಳದಲ್ಲಿಡಿ. ಪ್ರತಿದಿನ ಇದ್ರ ಪೂಜೆ ಮಾಡಿ. ಇದ್ರಿಂದ ನಿಮ್ಮ ಮನೆಯ ಎಲ್ಲ ಆರ್ಥಿಕ ಸಮಸ್ಯೆ ದೂರವಾಗುತ್ತದೆ.

ಕುಬೇರ, ಧನದ ಸ್ವಾಮಿ. ಕುಬೇರ ಮನಸ್ಸು ಮಾಡಿದ್ರೆ ಬಡವ ಕೂಡ ಶ್ರೀಮಂತನಾಗ್ತಾನೆ. ಕುಬೇರ ಯಂತ್ರವನ್ನು ಕಪಾಟಿನಲ್ಲಿಟ್ಟು ಪೂಜೆ ಮಾಡುವುದ್ರಿಂದ ಎಂದೂ ಕಪಾಟು ಖಾಲಿಯಾಗುವುದಿಲ್ಲ. ಕಪಾಟಿನಲ್ಲಿ ಸದಾ ಹಣ ತುಂಬಿರುತ್ತದೆ.

ಆರ್ಥಿಕ ಸಮಸ್ಯೆ ದೂರ ಮಾಡಲು ಮನೆಯ ಈಶಾನ್ಯ ಭಾಗದಲ್ಲಿ ಒಂದು ಕಾಗದದೊಳಗೆ ಉಪ್ಪನ್ನು ಹಾಕಿಡಿ. ಆಗಾಗ ಉಪ್ಪನ್ನು ಬದಲಾಯಿಸುತ್ತಿರಿ.

ತಾಮ್ರದ ಪಾತ್ರೆಯಲ್ಲಿ ನೀರನ್ನು ಹಾಕಿ ಮಲಗುವಾಗ ತಲೆ ಬದಿ ಇಟ್ಟು ಮಲಗಿ. ಸುಖ ನಿದ್ರೆಯ ಜೊತೆಗೆ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ.

ಮನೆಯ ಮುಖ್ಯ ಬಾಗಿಲಿನ ಮೇಲೆ ಗಣೇಶನ ಚಿತ್ರ ಹಾಗೂ ಓಂ ಚಿಹ್ನೆಯಿರಲಿ. ಇದು ನಿಮ್ಮ ಮನೆಯ ಆರ್ಥಿಕ ಸ್ಥಿತಿಯನ್ನು  ಸುಧಾರಿಸುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read