HomeRecipiesಮನೆಯಲ್ಲೆ ಸುಲಭವಾಗಿ ಮಾಡಿ ರುಚಿ ರುಚಿಯಾದ ʼದಹಿ ವಡಾʼ

ಮನೆಯಲ್ಲೆ ಸುಲಭವಾಗಿ ಮಾಡಿ ರುಚಿ ರುಚಿಯಾದ ʼದಹಿ ವಡಾʼ

ಬೇಕಾಗುವ ಪದಾರ್ಥಗಳು: ಉದ್ದಿನ ಬೇಳೆ- 1/2 ಕೆ.ಜಿ., ಹಸಿ ಮೆಣಸಿನಕಾಯಿ – 10, ಒಣ ಮೆಣಸಿನ ಕಾಯಿ ಪುಡಿ – 10 ಗ್ರಾಂ, ಜೀರಿಗೆ ಪುಡಿ – 1/2 ಚಮಚ, ಹೆಚ್ಚಿದ ಈರುಳ್ಳಿ – 5, ಮೊಸರು – 1/2 ಲೀಟರ್, ಅಡುಗೆ ಸೋಡಾ – ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು.

ತಯಾರಿಸುವ ವಿಧಾನ : ಉದ್ದಿನ ಬೇಳೆಯನ್ನು ಸುಮಾರು 8 ರಿಂದ 10 ಗಂಟೆಗಳ ಕಾಲ ನೆನೆಯಲು ಬಿಡಿ. ನಂತರ ನೀರು ಬಸಿದು, ಉಪ್ಪು ಹಾಕಿ ರುಬ್ಬಿಕೊಳ್ಳಿ. ಅದಕ್ಕೆ ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ, ಈರುಳ್ಳಿ, ಅಡುಗೆ ಸೋಡಾವನ್ನು ಹಾಕಿ ಕಲೆಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಮೇಲೆ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಒಲೆಯ ಮೇಲಿಡಿ. ಕಾದ ಮೇಲೆ ವಡೆಯನ್ನು ಎಣ್ಣೆಯಲ್ಲಿ ಬಿಡಿ. ಅವು ಕೆಂಪಗೆ ಬೆಂದ ಮೇಲೆ ಜಾಲರಿಯಿಂದ ತೆಗೆಯಿರಿ. ನಂತರ ಕಾಯಿಸಿ ತಣ್ಣಗಾದ ಬಿಸಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ಆರಿದ ವಡೆಗಳನ್ನು ಅದರಲ್ಲಿ ಹಾಕಿ ನೆನೆಸಿರಿ. 10 ರಿಂದ 15 ನಿಮಿಷಗಳ ಕಾಲ ಬಿಟ್ಟು ವಡೆಗಳನ್ನು ತೆಗೆದು ಎರಡೂ ಕೈಗಳಿಂದ ಅದುಮಿ ನೀರನ್ನು ಹಿಂಡಿಕೊಳ್ಳಿ. ಆಮೇಲೆ ಮೊಸರಿಗೆ ಒಣ ಮೆಣಸಿನಕಾಯಿ ಪುಡಿ, ಉಪ್ಪು, ಜೀರಿಗೆ ಪುಡಿ ಹಾಕಿ ಅದಕ್ಕೆ ಸಾಸಿವೆ ಒಗ್ಗರಣೆ ಮಾಡಿ ಹಾಕಿ. ಬಳಿಕ ವಡೆ ಪ್ಲೇಟ್ ನಲ್ಲಿಟ್ಟು ಒಗ್ಗರಣೆ ಮಾಡಿದ ಮೊಸರನ್ನು ಅದರ ಮೇಲೆ ಹಾಕಿ. ನೆನೆದ ಮೇಲೆ ಸವಿಯಲು ರುಚಿಕರ ದಹಿ ವಡಾ ಸಿದ್ಧ.

For Latest News Updates, Join Our Whatsapp Community🚩
RELATED ARTICLES

Most Popular