ಸಾಲು ಸಾಲು ರಜೆ: ಹಬ್ಬಕ್ಕೆ ಊರಿಗೆ ಹೊರಟವರಿಗೆ ಸಿಹಿ ಸುದ್ದಿ: KSRTCಯಿಂದ 2000 ಹೆಚ್ಚುವರಿ ಬಸ್

ಬೆಂಗಳೂರು: ಕೆಎಸ್‌ಆರ್‌ಟಿಸಿಯಿಂದ ಯುಗಾದಿ ಹಬ್ಬಕ್ಕೆ ಹೆಚ್ಚುವರಿ ಬಸ್ ಸೇವೆ ಒದಗಿಸಲಾಗುವುದು. ಸಾಲು ಸಾಲು ರಜೆ ಹಿನ್ನೆಲೆ ಊರಿಗೆ ಹೋಗುವವರ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ 2000ಕ್ಕೂ ಅಧಿಕ ಬಸ್ ಗಳನ್ನು ರಸ್ತೆಗಿಳಿಸಲು ನಾಲ್ಕು ನಿಗಮಗಳು ನಿರ್ಧರಿಸಿವೆ.

ಕೆಎಸ್ಆರ್ಟಿಸಿಯಿಂದ 1750 ಬಸ್, ವಾಯುವ್ಯ ಕರ್ನಾಟಕ 145, ಕಲ್ಯಾಣ ಕರ್ನಾಟಕ 200, ಬಿಎಂಟಿಸಿ 180 ವಿಶೇಷ ಬಸ್ ಗಳನ್ನು ಓಡಿಸಲಿದೆ. ನಾಲ್ಕು ನಿಗಮಗಳಿಂದ 2275 ಬಸ್ ಗಳನ್ನು ಓಡಿಸಲಾಗುವುದು. ಬೆಂಗಳೂರಿನಿಂದ ರಾಜ್ಯದ ವಿವಿಧ ಸ್ಥಳಗಳಿಗೆ, ಹೊರ ರಾಜ್ಯಗಳಿಗೆ, ವಿವಿಧೆಡೆಯಿಂದ ಬೆಂಗಳೂರಿಗೆ ಬಸ್ ಗಳು ಸಂಚರಿಸಲಿವೆ. ಮುಂಗಡ ಟಿಕೆಟ್ ಕಾಯ್ದಿರುಸವವರಿಗೆ ರಿಯಾಯಿತಿ ನೀಡಲಾಗುವುದು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read