ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಎಂ.ಡಿ ಸಮೀರ್ ಹಲವು ದಾಖಲೆಗಳ ಸಮೇತ ಪೊಲೀಸ್ ವಿಚಾರಣೆಗೆ ಹಾಜರಾಗಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಗೆ ಬ್ಯಾಗ್ ಹಿಡಿದುಕೊಂಡು ವಕೀಲರ ಜೊತೆ ಸಮೀರ್ ಹಾಜರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಇಂದು ಸಮೀರ್ ವಿಚಾರಣೆ ಎದುರಿಸಲಿದ್ದು, ಹಲವು ದಾಖಲೆಗಳನ್ನ ನೀಡಲಿದ್ದಾರೆ.
ಎಐ ವಿಡಿಯೋ ಮೂಲಕ ಗಲಭೆಗೆ ಪ್ರಚೋದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ಹಾಜರಾಗುವಂತೆ ಯೂಟ್ಯೂಬರ್ ಸಮೀರ್ ಗೆ ಬೆಳ್ತಂಗಡಿ ಪೊಲೀಸರು ಸೂಚನೆ ನೀಡಿದ್ದರು. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್ ನೀಡುವಂತೆ ಪೊಲಿಸರು ಸೂಚನೆ ನೀಡಿದ್ದರು. ಅಂತೆಯೇ ಸಮೀರ್ ವಿಚಾರಣೆಗೆ ಹಾಜರಾಗಿದ್ದಾರೆ.
You Might Also Like
TAGGED:ಎಂ.ಡಿ ಸಮೀರ್