ಶಾಲೆ ಸಮೀಪದಲ್ಲೇ ಬಾಲಕಿಯರಿಗೆ ಬಲವಂತವಾಗಿ ತಾಳಿ ಕಟ್ಟಿದ ಯುವಕರು

ವಿಜಯಪುರ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಎಸ್ಎಸ್ಎಲ್ಸಿ ಓದುತ್ತಿರುವ ಬಾಲಕಿಯರಿಬ್ಬರಿಗೆ ಇಬ್ಬರು ಯುವಕರು ಬಲವಂತವಾಗಿ ತಾಳಿ ಕಟ್ಟಿ ವಿಡಿಯೋ ವೈರಲ್ ಮಾಡಿದ 2 ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಎರಡು ಪ್ರತ್ಯೇಕ ಪ್ರಕರಣಗಳು ನಡೆದಿದ್ದು, ಮುದ್ದೇಬಿಹಾಳ ಠಾಣೆಗೆ ಅಪ್ರಾಪ್ತ ಬಾಲಕಿಯರು ಗುರುವಾರ ರಾತ್ರಿ ದೂರು ನೀಡಿದ್ದಾರೆ. ತಲೆಮರೆಸಿಕೊಂಡಿರುವ ಯುವಕರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ನವೆಂಬರ್ 24ರಂದು ಸರ್ಕಾರಿ ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಗೆ ಶಾಲೆಯ ಕಾಂಪೌಂಡ್ ಬಳಿ ಮೌನೇಶ ಹನುಮಂತ ಮಾದರ ಎಂಬಾತ ಬಲವಂತವಾಗಿ ತಾಳಿ ಕಟ್ಟಿದ್ದಾನೆ. ಸೆಪ್ಟೆಂಬರ್ 1ರಂದು ಸರ್ಕಾರಿ ಆಸ್ಪತ್ರೆ ಸಮೀಪ ಖಾಸಗಿ ಶಾಲೆಯೊಂದರ ವಿದ್ಯಾರ್ಥಿನಿಗೆ ಸಂಗಮೇಶ ಬಡಪ್ಪ ಜುಂಜುವಾರ ಎಂಬಾತ ಬಲವಂತವಾಗಿ ತಾಳಿ ಕಟ್ಟಿದ್ದಾನೆ.

ಸಂಗಮೇಶ ಕೃತ್ಯ ನಡೆಸಿದ ಕೆಲವು ದಿನಗಳ ನಂತರ ಮೌನೇಶ ಇಂತಹ ಕೃತ್ಯ ಎಸಗಿದ್ದಾನೆ. ತಾಳಿ ಕಟ್ಟುವ ವಿಡಿಯೋ ಚಿತ್ರೀಕರಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಬಾಲಕಿಯರು ಒಂದೇ ಸಮುದಾಯದವರಾಗಿದ್ದು, ತಾಳಿ ಕಟ್ಟಿ ಮದುವೆಯಾಗಿದ್ದೇವೆ ಎಂದು ಹೇಳಿದಾಗ ಗಾಬರಿಯಿಂದ ತಾಳಿ ಕಿತ್ತೆಸೆದು ಸ್ಥಳದಿಂದ ಓಡಿ ಹೋಗಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಗುರುವಾರ ಬಾಲಕಿಯರು ದೂರು ನೀಡಿದ್ದು, ಅಪರಾಧ ವಿಭಾಗದ ಮಹಿಳಾ ಪಿಎಸ್ಐ ಆರ್‌.ಎಲ್‌. ಮನ್ನಾಭಾಯಿ ಅವರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read