
ಚಿತ್ರದುರ್ಗ: ಬೈಕ್ ವ್ಹೀಲಿಂಗ್ ಮಾಡಬೇಡಿ ಎಂದು ಹೇಳಿದ್ದಕ್ಕೆ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಚಿತ್ರದುರ್ಗದ ಕೋಟೆ ಮುಂಭಾಗದ ಕಾಮನಬಾವಿ ಬಡಾವಣೆಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಕಬೀರಾನಂದ ನಗರದ ಕರುವಿನಕಟ್ಟೆ ಸರ್ಕಲ್ ನಿವಾಸಿ 23 ವರ್ಷದ ಮಾರುತಿ ಕೊಲೆಯಾದವರು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಾಮನಬಾವಿ ಬಡಾವಣೆಯ ಕೊರಚರಹಟ್ಟಿ ಯುವಕರು ರಾತ್ರಿ ಹೊತ್ತು ವ್ಹೀಲಿಂಗ್ ಮಾಡುತ್ತಿದ್ದರು. ವೇಗವಾಗಿ ಬೈಕ್ ಚಾಲನೆ ಮಾಡಿಕೊಂಡು ವ್ಹೀಲಿಂಗ್ ಮಾಡುತ್ತಿದ್ದು, ಇಲ್ಲಿ ಚಿಕ್ಕ ಮಕ್ಕಳು ಓಡಾಡುತ್ತಿರುತ್ತಾರೆ. ಹೀಗಾಗಿ ನಿಧಾನವಾಗಿ ಬೈಕ್ ಓಡಿಸಿ ಎಂದು ಮಾರುತಿ ಬೈದು ಬುದ್ಧಿವಾದ ಹೇಳಿದ್ದರು.
ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಜೀವನ್, ಆಂಜನಿ ಮತ್ತಿತರರು ಶನಿವಾರ ರಾತ್ರಿ ಮಾರುತಿ ಜೊತೆಗೆ ಜಗಳ ತೆಗೆದು ಎದೆ ಭಾಗಕ್ಕೆ ಚಾಕುವಿನಿಂದ ಇರಿದು ತಲೆಗೆ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿ ಕ್ರಮಕೈಗೊಂಡಿದ್ದಾರೆ.
