‘ನಿಮ್ಮಂತೆ ನಿಮ್ಮ ಆತ್ಮ ಸಹ ಸುಂದರ’ : ನಟಿ ಪೂನಂ ಪಾಂಡೆ ಬೆಂಬಲಕ್ಕೆ ನಿಂತ RGV

ನಟಿ ಪೂನಂ ಪಾಂಡೆ ಅವರ ಸಾವು ಫೇಕ್ ಎಂದು ದೃಢವಾದ ನಂತರ ರಾಮ್ ಗೋಪಾಲ್ ವರ್ಮಾ ಅವರನ್ನು ನಟಿ ಪೂನಂ ಪಾಂಡೆಯನ್ನು ಸಮರ್ಥಿಸಿಕೊಂಡರು.

ಪೂನಂ ಪಾಂಡೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಗಮನ ಸೆಳೆಯಲು, ಜಾಗೃತಿ ಮೂಡಿಸಲು ಈ ತರ ಮಾಡಿದ್ದೇನೆ ಎಂದು ನಟಿ ಪೂನಂ ಪಾಂಡೆ ಶನಿವಾರ ಸ್ಪಷ್ಟಪಡಿಸಿದ್ದಾರೆ.
ಈ ಬೆನ್ನಲ್ಲೇ ಪೂನಂ ಪಾಂಡೆ ವರ್ತನೆಗೆ ಭಾರಿ ಟೀಕೆಗಳು ವ್ಯಕ್ತವಾಗಿದೆ. ಟೀಕೆಗಳ ನಡುವೆ, ರಾಮ್ ಗೋಪಾಲ್ ವರ್ಮಾ ನಟಿಯ ಪ್ರಯತ್ನವನ್ನು ಶ್ಲಾಘಿಸಿದರು.

“ಹಾಯ್ @iPoonampandey ಈ ವಿಷಯದ ಬಗ್ಗೆ ಗಮನ ಸೆಳೆಯಲು ನೀವು ಬಳಸಿದ ವಿಧಾನದಿಂದ ಹಲವು ಟೀಕೆಗಳು ಬರಬಹುದು, ಆದರೆ ನಿಮ್ಮ ಉದ್ದೇಶವನ್ನು ಅಥವಾ ಈ ಹುಸಿಯಿಂದ ನೀವು ಏನು ಸಾಧಿಸಿದ್ದೀರಿ ಎಂದು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ , ನಿಮ್ಮ ಪ್ರಯತ್ನದಿಂದ ಈಗ ಗರ್ಭಕಂಠ ಕ್ಯಾನ್ಸರ್ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿದೆ.ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಚರ್ಚೆ ಈಗ ಎಲ್ಲೆಡೆ ನಡೆಯುತ್ತಿದೆ,ನಿಮ್ಮಂತೆಯೇ ನಿಮ್ಮ ಆತ್ಮ ಕೂಡ ಸುಂದರವಾಗಿದೆ  ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read