ಹೊಸಪೇಟೆ(ವಿಜಯನಗರ ಜಿಲ್ಲೆ): ಯುವತಿಯನ್ನು ಕೊಲೆ ಮಾಡಿ ಮೃತದೇಹಕ್ಕೆ ಬೆಂಕಿ ಹಚ್ಚಿದ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗುಳೇದಹಟ್ಟಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಗುರುವಾರ ಅರೆಬರೆ ಸುಟ್ಟ ಮೃತದೇಹ ಕಂಡು ಬಂದಿದೆ. ಮಾಚಿಹಳ್ಳಿ ತಾಂಡಾದ ಆರ್. ಅಶ್ವಿನಿ ಬಾಯಿ(32) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಆಗಸ್ಟ್ 11 ರಿಂದ ಆಗಸ್ಟ್ 14ರ ಬೆಳಿಗ್ಗೆ 11 ಗಂಟೆಯ ನಡುವೆ ದುಷ್ಕರ್ಮಿಗಳು ಕಂಚಿಕೆರೆ -ಅರಸೀಕೆರೆ ಮುಖ್ಯರಸ್ತೆಯಲ್ಲಿ ಗುಳೇದಹಟ್ಟಿ ತಾಂಡಾ ಕ್ರಾಸ್ ಸಮೀಪ ಅರಣ್ಯ ಪ್ರದೇಶದಲ್ಲಿ ಅಶ್ವಿನಿ ಕೊಲೆ ಮಾಡಿ ಮೃತ ದೇಹಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಅರೆಬರೆ ಸುಟ್ಟ ಶವ ಪತ್ತೆಯಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.