ಲಾರಿ ಹಿಂದೆ ಯುವಕರ ಅಪಾಯಕಾರಿ ಪ್ರಯಾಣ‌ ; ಬೆಚ್ಚಿಬೀಳಿಸುವಂತಿದೆ ವಿಡಿಯೋ | Watch

ರಸ್ತೆ ತುಂಬಾ ವಾಹನಗಳು, ರಾತ್ರಿ ಸಮಯ. ಎಲ್ಲರೂ ತಮ್ಮ ಗಮ್ಯಸ್ಥಾನ ತಲುಪಲು ಅವಸರದಲ್ಲಿದ್ದಾರೆ. ಆದರೆ ಇಲ್ಲೊಂದು ದೃಶ್ಯ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು.

ಒಂದು ಟ್ಯಾಂಕರ್ ಲಾರಿ ವೇಗವಾಗಿ ಚಲಿಸುತ್ತಿದ್ದು, ಅದರ ಹಿಂಭಾಗದಲ್ಲಿ ಇಬ್ಬರು ಯುವಕರು ನಿಂತಿದ್ದರು. ಒಬ್ಬ ಯುವಕ ಲಾರಿಯ ಹಿಂಭಾಗದಲ್ಲಿದ್ದ ಕಬ್ಬಿಣದ ರಾಡ್ ಮೇಲೆ ನಿಂತಿದ್ದರೆ, ಮತ್ತೊಬ್ಬ ಆರಾಮವಾಗಿ ಕುಳಿತುಕೊಂಡಿದ್ದ. ಲಾರಿ ಎಷ್ಟು ವೇಗವಾಗಿ ಚಲಿಸುತ್ತಿದ್ದರೂ ಅವರಿಗೆ ಯಾವುದೇ ಭಯವಿರಲಿಲ್ಲ.

ಈ ದೃಶ್ಯವನ್ನು ಬೇರೆ ವಾಹನದಲ್ಲಿ ಹೋಗುತ್ತಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದಾರೆ. “ಇಂತಹ ಸಾಹಸಗಳು ಅಪಾಯಕಾರಿ” ಎಂದು ಕೆಲವರು ಕಾಮೆಂಟ್ ಮಾಡಿದರೆ, “ವಿಡಿಯೋ ಮಾಡುವ ಬದಲು ಅವರಿಗೆ ಸಹಾಯ ಮಾಡಬಹುದಿತ್ತು” ಎಂದು ಇನ್ನೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

 

View this post on Instagram

 

A post shared by Suraj Waghmode (@suraj.0244)

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read