ರಾಮನಗರ: ದುಷ್ಕರ್ಮಿಯೊಬ್ಬ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಬಿಡದಿ ಬಳಿಯ ಕದಂಬ ಹೋಟೆಲ್ ನಲ್ಲಿ ನದೆದಿದೆ.
ಚನ್ನಪಟ್ತಣದ ಕೊಂಡಾಪುರ ಗ್ರಾಮದ ನಿಶಾಂತ್ (25) ಕೊಲೆಯಾದ ಯುವಕ. ನಿಶಾಂತ್ ಕಳೆದ ಎರಡುವರೆ ತಿಂಗಳಿಂದ ಕದಂಬ ಹೋಟೆಲ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಹಳೇ ಧ್ವೇಷಕ್ಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ನಿಶಾಂತ್ ನ ಕಿವಿ ಭಾಗಕ್ಕೆ ಚಾಕುವಿನಿಂದ ಇರಿದ ದುಷ್ಕರ್ಮಿ ಕೊಲೆ ಮಾಡಿದ್ದಾನೆ. ಬಳಿಕ ಹೋಟೆಲ್ ಸಿಸಿಟಿವಿ ಡಿವಿಆರ್ ತೆಗೆದುಕೊಂಡು ಪರಾರಿಯಾಗಿದ್ದಾನೆ. ಘಟನಾಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
