ಬಾಗಲಕೋಟೆ: ತಂಗಿಯ ಜೊತೆ ಯುವಕನೊಬ್ಬ ಫೋನ್ ನಲ್ಲಿ ಮಾತನಾಡಿದ್ದಕ್ಕೆ ಯುವತಿಯ ಅಣ್ಣಂದಿರು ಯುವಕನನ್ನೇ ಹತ್ಯೆಗೈದಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಮಂಜು ಹತ್ಯೆಯಾದ ಯುವಕ. ಪ್ರವೀಣ್ ಮಾಂಗ್ , ಅನಿಲ್ ಮಾಂಗ್, ಆಕಾಶ್ ಮಾಂಗ್ ಪ್ರದೀಪ್ ಮಾಂಗ್ ಎಂಬ ನಾಲ್ವರು ಸಹೋದರರು ಯುವಕನನ್ನು ಇರಿದು ಕೊಂದಿರುವ ಆರೋಪಿಗಳು.
ಆರೋಪಿಗಳಾದ ನಾಲ್ವರು ಅಣ್ಣಂದಿರ ಸಹೋದರಿಯ ಜೊತೆ ಮಂಜು ಫೋನ್ ನಲ್ಲಿ ಮಾತನಾಡಿದ್ದನಂತೆ ಇಷ್ಟಕ್ಕೇ ಅನುಮಾನಗೊಂಡ ಅಣ್ಣಂದಿರು ಮಂಜುನನ್ನು ಇರಿದು ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.