ಚಿಕ್ಕಮಗಳೂರು: ಅನ್ಲೋಡ್ ಮಾಡುವಾಗ ಗೊಬ್ಬರದ ಮೂಟೆ ಮೈಮೇಲೆ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಸಮೀಪದ ಗೇರುಬೈಲಿನಲ್ಲಿ ನಡೆದಿದೆ.
ಕರ್ಕೇಶ್ವರ ಗ್ರಾಮದ ನಿವಾಸಿ ಮೇಲ್ಪಾಲ್ ನ ಪೂರ್ಣೇಶ್(27) ಮೃತಪಟ್ಟ ಯುವಕ. ಮೇಲ್ಪಾಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪೂರ್ಣೇಶ್ ಕೆಲಸ ಮಾಡುತ್ತಿದ್ದು, ಗುರುವಾರ ಕೃಷಿ ಸಂಘದಿಂದ ಖಾಸಗಿ ಎಸ್ಟೇಟ್ ಗೆ ನೀಡಲು ಗೊಬ್ಬರದ ಮೂಟೆಗಳನ್ನು ಪಿಕಪ್ ವಾಹನದಲ್ಲಿ ತುಂಬಿಕೊಂಡು ಹೋಗಿದ್ದಾರೆ. ಪಿಕ್ ಅಪ್ ವಾಹನದಿಂದ ಗೊಬ್ಬರದ ಮೂಟೆ ಆನ್ ಲೋಡ್ ಮಾಡುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕುಸಿದಿದ್ದಾರೆ. ಈ ವೇಳೆ ಅವರ ಕುತ್ತಿಗೆಯ ಮೇಲೆ ಗೊಬ್ಬರದ ಮೂಟೆ ಬಿದ್ದು ಮೃತಪಟ್ಟಿದ್ದಾರೆ.