ಚಾಮರಾಜನಗರ: ಸ್ನೇಹಿತರೊಂದಿಗೆ ನದಿಗೆ ಈಜಲು ಹೋಗಿದ್ದ ಯುವಕ ಕಾವೇರಿ ನದಿ ಪಾಲಾಗಿರುವ ಘಟನೆ ಚಾಮರಾಜನಗರದ ಕೊಳ್ಳೆಗಾಲ ತಾಲೂಕಿನ ಶಿವನಸಮುದ್ರ ವೆಸ್ಲಿ ಸೇತುವೆ ಬಳಿ ನಡೆದಿದೆ.
ಸಾಹಿಲ್ ಪಾಷಾ (23) ಮೃತ ಯುವಕ. ಬೆಂಗಳೂರಿನ ಜೆಪಿ ನಗರದ ನಿವಾಸಿ. 9 ಜನ ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ತೆರಳಿದ್ದ. ಈ ವೇಳೆ ದುರಂತ ಅಂತ್ಯ ಕಂಡಿದ್ದಾನೆ.
ರಂಜಾನ್ ಮುಗಿದ ಹಿನ್ನೆಲೆಯಲ್ಲಿ ಸ್ಸಾಹಿಲ್ ಹಾಗೂ ಸ್ನೇಹಿತರ ಗುಂಪು ಶಿವನಸಮುದ್ರ ಬಳಿಯ ದರ್ಗಾಕ್ಕೆ ಹೋಗಿದ್ದರು. ಪ್ರಾಥನೆ ಸಲ್ಲಿಸಿ ಬಳಿಕ ಸೇತುವೆ ಬಳಿ ಕಲ್ಲುಬಂಡೆ ಬಳಿ ಹೋಗಿದ್ದವರು ನದಿಯಲ್ಲಿ ಈಜಲು ಇಳಿದಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಸಾಹಿಲ್ ಸಾವನ್ನಪ್ಪಿದ್ದಾನೆ.
ಕೊಳ್ಳೆಗಾಲ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.