ಕ್ಲಬ್ ಹೌಸ್ ಆಪ್ ನಲ್ಲಿ ಪರಿಚಯ; ಆಂಟಿ ಜೊತೆ ಯುವಕನ ಲವ್ವಿಡವ್ವಿ; ಅತ್ಯಾಚಾರವೆಸಗಿ ಮಹಿಳೆಗೆ ಬ್ಲ್ಯಾಕ್ ಮೇಲ್

ಕಾರವಾರ: ಕ್ಲಬ್ ಹೌಸ್ ಆಪ್ ಮೂಲಕ ಪರಿಚಯನಾದ ಯುವಕನೊಬ್ಬ ವಿವಾಹಿತ ಮಹಿಳೆಯೊಂದಿಗೆ ಸಲುಗೆ ಬೆಳೆಸಿ ಬಳಿಕ ಅತ್ಯಾಚಾರ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯುವಕನನ್ನು ಕಾರವಾರ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಶಾಂತ್ ಭಟ್ ಮಾಣಿಲ ಬಂಧಿತ ಆರೋಪಿ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಆರ್ಲಪದವು ಮೂಲದ ನಿವಾಸಿ.

ಆರೋಪಿ ಪ್ರಶಾಂತ್, ಮಹಿಳೆಗೆ 2020ರಲ್ಲಿ ಕ್ಲಬ್ ಹೌಸ್ ಆಪ್ ಮೂಲಕ ಪರಿಚಯನಾಗಿದ್ದನಂತೆ. ಹೀಗೆ ಆರಂಭವಾದ ಪರಿಚಯ ಪರಸ್ಪರ ಭೇಟಿವರೆಗೂ ಹೋಗಿದೆ. 2023ರ ಜನವರಿಯಲ್ಲಿ ಯುವಕ ಖುದ್ದು ಭೇಟಿಗೆ ಮಹಿಳೆಯನ್ನು ಖಾಸಗಿ ಲಾಡ್ಜ್ ಗೆ ಕರೆಸಿಕೊಂಡಿದ್ದನಂತೆ. ಈ ವೇಳೆ ಮಹಿಳೆಯ ಮೇಲೆ ಯುವಕ ಅತ್ಯಾಚಾರವೆಸಗಿದ್ದಾನೆ. ಅದಾದ ಬಳಿಕ ಫೆಬ್ರವರಿಯಲ್ಲಿಯೂ ಅದೇ ಲಾಡ್ಜ್ ನಲ್ಲಿ ಆರೋಪಿ ಮಹಿಳೆ ಮೇಲೆ ಅತ್ಯಾಚಾರವೆಸಗಿ ಖಾಸಗಿ ಕ್ಷಣಗಳ ವಿಡಿಯೋ, ಫೋಟೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದನಂತೆ. ಈ ಘಟನೆಗಳ ಬಳಿಕ ಯುವಕ ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡಲು ಶುರುಮಾಡಿದ್ದ ಎನ್ನಲಾಗಿದೆ.

ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವುದಾಗಿ ಹೇಳಿ ಆರೋಪಿ ಯುವಕ, ಮಹಿಳೆಯನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದನಂತೆ. ಆರಂಭದಲ್ಲಿ 25 ಸಾವಿರ ಬಳಿಕ ಹಂತ ಹಂತವಾಗಿ 7 ಲಕ್ಷ ರೂಪಾಯಿವರೆಗೂ ಹಣ ದೋಚಿದ್ದಾಗಿ ಮಹಿಳೆ ಆರೋಪಿದ್ದಾರೆ.

ಯುವಕನ ಬ್ಲ್ಯಾಕ್ ಮೇಲ್ ಗೆ ಬೇಸತ್ತ ಮಹಿಳೆ ಕಾರವಾರಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪ್ರಶಾಂತ್ ಭಟ್ ನನ್ನು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read