ಬೆಂಗಳೂರು: ಮದುವೆಯಾಗಲಿ ನಿರಾಕರಿಸಿದ್ದಕ್ಕೆ ಯುವಕರ ಗ್ಯಾಂಗ್ ವೊಂದು ಯುವತಿಯನ್ನೇ ಕಿಡ್ನ್ಯಾಪ್ ಮಾಡಿರುವ ಘಟನೆ ಬೆಂಗಳೂರಿನ ಚಿಕ್ಕಲಸಂದ್ರದಲ್ಲಿ ನಡೆದಿದೆ.
ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಗಂಟೆಗಳಲ್ಲಿ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ, ಯುವತಿಯನ್ನು ರಕ್ಷಿಸಿದ್ದಾರೆ. ರಂಗನಾಥ, ರಾಜೇಶ್, ಚಂದನ್, ಶ್ರೇಯಸ್ ಹಾಗೂ ಮಂಜುನಾಥ್ ಬಂಧಿತರು.
ಯುವತಿ ಅಪಹರಿಚಯವಿದ್ದ ರಂಗನಾಥ್ ಹಾಗೂ ಗ್ಯಾಂಗ್ ನಿಂದಲೇ ಯುವತಿಯ ಕಿಡ್ನ್ಯಾಪ್ ನಡೆದಿದೆ. ಚಿಕ್ಕಲಸಂದ್ರದಲ್ಲಿ ವಾಸವಿದ್ದ ಯುವತಿಯನ್ನು ನಿನ್ನೆ ಮನೆ ಬಳಿಯೇ ಕಿಡ್ನ್ಯಾಪ್ ಮಾಡಲಾಗಿತ್ತು. ಈ ಬಗ್ಗೆ ಯುವತಿಯ ಪೋಷಕರು ದೂರು ನೀಡಿದ್ದರು.
ಆರೋಪಿ ರಂಗನಾಥ್, ಬೈಕ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಈ ಹಿಂದೆ ಕೊಲೆ ಕೇಸ್ ನಲ್ಲಿ ಜೈಲು ಸೇರಿ ಬಿಡುಗಡೆಯಾಗಿ ಬಂದಿದ್ದ. ಯುವತಿಯ ಹಿಂದೆ ಬಿದ್ದಿದ್ದ ರಂಗನಾಥ್, ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ಯುವತಿ ನಿರಾಕರಿಸಿದ್ದಳು. ಅಲ್ಲದೇ ಯುವತಿಯ ಮನೆಗೆ ಬಂದು ಗಲಾಟೆ ಮಾಡಿದ್ದ. ನಿನ್ನೆ ಮನೆ ಬಳಿಯೇ ರಂಗನಾಥ್ ಹಾಗೂ ಗ್ಯಾಂಗ್ ಯುವತಿಯನ್ನು ಅಪಹರಿಸಿತ್ತು.
ಸದ್ಯ ಆರೋಪಿಗಳನ್ನು ಬಂಧಿಸಿ ಯುವತಿಯನ್ನು ರಕ್ಷಿಸಲಾಗಿದೆ. ಯುವತಿ ಸುರಕ್ಷಿತವಾಗಿದ್ದಾಳೆ ಎಂದು ತಿಳಿದುಬಂದಿದೆ.