‘ಅಂಜೂರ’ ದ ಉಪಯೋಗಗಳನ್ನು ತಿಳಿದ್ರೆ ಬೆರಗಾಗ್ತೀರಾ……!

ಅಂಜೂರ ಹಣ್ಣು ತುಂಬಾ ತಂಪು. ಇದು ಕಫನಾಶಕ ಮತ್ತು ರಕ್ತಪಿತ್ತನಾಶಕ. ಶ್ವಾಸಕೋಶದಲ್ಲಿ ಸೇರಿಕೊಂಡಿರುವ ಕಫವನ್ನು ಕರಗಿಸಿ ಹೊರ ಬರುವಂತೆ ಮಾಡುತ್ತದೆ.

ಮೂಲ ವ್ಯಾಧಿ, ಮೂತ್ರಕೋಶದಲ್ಲಿ ಕಲ್ಲು ಮುಂತಾದ ವ್ಯಾಧಿಗಳಿಗೆ ಇದು ಪರಿಣಾಮಕಾರಿ. ಅದಲ್ಲದೇ ಇದರ ಇನ್ನೂ ಕೆಲವು ಪ್ರಯೋಜನಗಳನ್ನು ತಿಳಿಯೋಣ.

* ಮಕ್ಕಳು ಗಾಜಿನ ತುಂಡು, ಪಿನ್ನು ಮುಂತಾದವುಗಳನ್ನು ನುಂಗಿದ್ದರೆ, ಈ ಹಣ್ಣನ್ನು ತಿನ್ನಿಸಿದರೆ ಅದು ಮಲದಲ್ಲಿ ಹೊರಹೋಗುತ್ತದೆ.

* 2-3 ಹಣ್ಣುಗಳನ್ನು ದಿನನಿತ್ಯವೂ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಕೆಲ ದಿನಗಳಲ್ಲಿ ಮಲಬದ್ಧತೆ ದೂರವಾಗುತ್ತದೆ.

* 5-6 ಹಣ್ಣುಗಳನ್ನು ಒಣದ್ರಾಕ್ಷಿಗಳೊಂದಿಗೆ ಒಂದು ಲೋಟ ಹಾಲಿನಲ್ಲಿ ಹಾಕಿ ಬೇಯಿಸಿ ಆ ಹಾಲನ್ನು ಕುಡಿಯುವುದರಿಂದ ರಕ್ತ ಶುದ್ಧಿಯಾಗಿ ರಕ್ತ ವೃದ್ಧಿಯಾಗುತ್ತದೆ.

* ಅಂಜೂರದ ರಸವನ್ನು ಸೇವಿಸುವುದರಿಂದ ಉಷ್ಣ ಪೀಡತೆಯಿಂದ ಮುಕ್ತಿ ಹೊಂದಬಹುದು.

* ಶ್ವಾಶಕೋಶದ ತೊಂದರೆಯಿರುವವರು 5 ಅಂಜೂರವನ್ನು ಅರ್ಧ ಲೀಟರ್ ನೀರಿನಲ್ಲಿ ಹಾಕಿ ಕಾಯಿಸಿ ನಂತರ ಆರಿಸಿ ಇಟ್ಟುಕೊಂಡು ಬೆಳಗ್ಗೆ-ಸಂಜೆ ಸೇವಿಸುವುದರಿಂದ ಸಮಸ್ಯೆ ದೂರವಾಗುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read