ಮಹಿಳೆ ಧರಿಸಿದ್ದ ಹೆಲ್ಮೆಟ್ ನೋಡಿ ಬಿದ್ದು ಬಿದ್ದು ನಕ್ಕ ಜನ | Video

ಕಾನ್ಪುರದಲ್ಲಿ ಕಂಡ ಘಟನೆಯ ವಿಡಿಯೋವೊಂದು ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದ್ದು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದೆ. ಅವನೀಶ್ ಮಿಶ್ರಾ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು ವಿಡಿಯೋ ಕ್ಲಿಪ್ ನಲ್ಲಿ ಮಹಿಳೆಯೊಬ್ಬರು ಸ್ಕೂಟರ್ ಓಡಿಸುವಾಗ ಹಾಕಿರುವ ಹೆಲ್ಮೆಟ್ ಗಮನಸೆಳೆದಿದ್ದು ನಗೆ ಮೂಡಿಸಿದೆ.

ವಿಡಿಯೋ ನೋಡಿದ ತಕ್ಷಣ ಮಹಿಳೆಯೊಬ್ಬಳು ರಸ್ತೆಯಲ್ಲಿ ಬೈಕ್ ಚಲಾಯಿಸುತ್ತಿರುವಂತೆ ಕಾಣುತ್ತದೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ, ತಲೆಯ ಹಿಂಭಾಗವನ್ನ ಸಂಪೂರ್ಣವಾಗಿ ಆವರಿಸಿರುವ ವಿಚಿತ್ರವೆನಿಸುವ ಅಪರೂಪದ ಹೆಲ್ಮೆಟ್ ಧರಿಸಿರೋದು ಕಂಡುಬಂದಿದೆ. ಹೆಲ್ಮೆಟ್ ನ ಆಕೃತಿ ಗಮನಿಸಿದಾಗ, ಹೆಲ್ಮೆಟ್ ಇಡೀ ತಲೆಯನ್ನು ತಿನ್ನುತ್ತಿರುವಂತೆ ಕಾಣುತ್ತಿತ್ತು.

ಈ ರೀತಿಯ ಹೆಲ್ಮೆಟ್ ನೋಡಿದ ನೆಟ್ಟಿಗರು ನಕ್ಕಿದ್ದು ಅಂತಹ ವಿಶಿಷ್ಟ ಶೈಲಿಯಲ್ಲಿ ಹೆಲ್ಮೆಟ್ ಧರಿಸುವ ವಿಶ್ವಾಸ ಹೊಂದಿದ ಮಹಿಳೆಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read