ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಯುವ ವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಳಿಕ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧದ ಕೂಗು ಮತ್ತಷ್ಟು ಜೋರಾಗಿದೆ. ದೇಶದಾದ್ಯಂತ ಸಾರ್ವಜನಿಕರು ಆಕ್ರೋಶಭರಿತರಾಗಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಆರೋಪಿಗಳ ವಿರುದ್ಧ ಶೀಘ್ರದಲ್ಲೇ ವಿಚಾರಣೆ ನಡೆಸಿ ಅಂತವರಿಗೆ ಗಲ್ಲು ಶಿಕ್ಷೆಯಂತಹ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಕೇಳಿ ಬರುತ್ತಿದೆ.
ಇದೇ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹೊರ ಬರುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಮಹಿಳೆಯರಿಗೆ ಅದರಲ್ಲೂ ವಿದೇಶಿ ಮಹಿಳೆಯರಿಗೆ ಒಂಟಿಯಾಗಿ ಪ್ರಯಾಣಿಸುವುದು ಎಷ್ಟು ಕಷ್ಟಕರ ಎಂಬ ಸಂಗತಿಯನ್ನು ಬಹಿರಂಗಪಡಿಸಿದೆ. ಈ ಘಟನೆ ಭಾರತದ ಯಾವ ರೈಲಿನಲ್ಲಿ ಹಾಗೂ ಯಾವ ಭಾಗದಲ್ಲಿ ನಡೆದಿದೆ ಎಂಬುದು ಬಹಿರಂಗವಾಗಿಲ್ಲವಾದರೂ ವಿಡಿಯೋ ದೃಶ್ಯಾವಳಿ ವೀಕ್ಷಿಸಿ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಕೂಗು ಕೇಳಿ ಬರುತ್ತಿದೆ.
ವಿಡಿಯೋದಲ್ಲಿ ಕಂಡು ಬರುವಂತೆ ಜಪಾನ್ ಯುವತಿ ತಮ್ಮ ಕಂಪಾರ್ಟ್ಮೆಂಟ್ ನಲ್ಲಿ ಮಲಗಿದ್ದ ವೇಳೆ ಕರ್ಟನ್ ಸರಿಸಿ ಬರುವ ವ್ಯಕ್ತಿಯೊಬ್ಬ, ಆಕೆಯ ತಲೆಯನ್ನು ಅನುಚಿತವಾಗಿ ನೇವರಿಸಿ ನೀನು ಸುಂದರವಾಗಿದ್ದೀಯ, ಐ ಲೈಕ್ ಯು ಎನ್ನುತ್ತಾನೆ. ಇದರಿಂದ ಜಪಾನ್ ಯುವತಿ ಗಾಬರಿಗೊಂಡಿದ್ದು ಆದರೂ ಕೂಡ ಸಾವರಿಸಿಕೊಂಡು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ನಗುನಗುತ್ತಲೇ ಥ್ಯಾಂಕ್ ಯು ಎಂದು ಹೇಳಿ ಆತನನ್ನು ಅಲ್ಲಿಂದ ಸಾಗ ಹಾಕಿದ್ದು, ಬಳಿಕ ನಡೆದ ಅಷ್ಟು ಘಟನೆಯನ್ನು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು, ಒಂಟಿ ಮಹಿಳೆಯರು ಪ್ರಯಾಣಿಸುತ್ತಿದ್ದ ವೇಳೆ ಅವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
जापान की एक लड़की हमारे देश मे ट्रेन में रात का सफर कर रही थी।
एक आदमी आता है, उसे सहलाते हुए जगाता है और कहता है I Like U. pic.twitter.com/zrxalYjNyG— Kavish Aziz (@azizkavish) August 20, 2024