ಕೇಶವಮೂರ್ತಿ ನಿರ್ದೇಶನದ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಚಿತ್ರ ಮುಂದಿನ ವರ್ಷ ಜನವರಿ 10ರಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಇಂದು ಇದರ ಟ್ರೈಲರ್ ರಿಲೀಸ್ ಮಾಡುವುದರ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ.
ಈ ಚಿತ್ರವನ್ನು ಪಿಕ್ಚರ್ ಶಾಪ್ ಮತ್ತು ನೇಟಿವ್ ಕ್ರಾಫ್ಟ್ ಬ್ಯಾನರ್ ನಲ್ಲಿ ಮಗೇಶ್ ರವೀಂದ್ರನ್ ಮತ್ತು ಕುಬೇಂದ್ರನ್ ನಿರ್ಮಾಣ ಮಾಡಿದ್ದು, ದಿಲೀಪ್ ರಾಜ್ ಸೇರಿದಂತೆ ಶಿಲ್ಪ ಮಂಜುನಾಥ್, ಮಧುಸೂದನ್ ಗೋವಿಂದ್, ಅಪೂರ್ವ, ಅಜಯ್ ಶರ್ಮ ತಾರಾಂಗಣದಲ್ಲಿದ್ದಾರೆ. ಕೇಶವಮೂರ್ತಿ ಸಂಭಾಷಣೆ, ಕುಬೇಂದ್ರನ್ ಸಂಕಲನ, ಹಾಗೂ ಹರ್ಷ ಕುಮಾರ್ ಗೌಡ ಛಾಯಾಗ್ರಾಹಣವಿದೆ.