ಭಾರತೀಯರ ಕುರಿತು ಜನಾಂಗೀಯ ನಿಂದನೆ; ಸಿಂಗಾಪುರದ ಚಾಲಕನ ವಿಡಿಯೋ ವೈರಲ್​

ಸಿಂಗಾಪುರದಲ್ಲಿ ಡ್ರೈವಿಂಗ್​ ಸೇವೆಯನ್ನು ಒದಗಿಸೋ ಕಂಪನಿಯಾದ ಟಾಡಾದ ಚಾಲಕ ಹಾಗೂ ಪ್ರಯಾಣಿಕರ ನಡುವಿನ ವಾಗ್ವಾದದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿ ಮಹಿಳಾ ಪ್ರಯಾಣಿಕೆಯ ಮೇಲೆ ಚಾಲಕನು ಜನಾಂಗೀಯ ಕಮೆಂಟ್​ ಮಾಡುತ್ತಿರೋದನ್ನು ಕಾಣಬಹುದಾಗಿದೆ. ತಪ್ಪು ದಾರಿಯಲ್ಲಿ ಚಾಲಕ ತೆರಳಿದ ವಿಚಾರವಾಗಿ ಮಹಿಳೆ ಹಾಗೂ ಡ್ರೈವರ್​ ನಡುವೆ ಮಾತಿನ ಚಕಮಕಿ ಆರಂಭಗೊಂಡಿತ್ತು ಎನ್ನಲಾಗಿದೆ.

ಈ ಮಹಿಳೆಯನ್ನು ಜಾನ್​ ಹೋಡೆನ್​​ ಎಂದು ಗುರುತಿಸಲಾಗಿದೆ. ಈ ವಿಡಿಯೋವನ್ನುಅವರು ಸೋಶಿಯಲ್​ ಮೀಡಿಯಾಗಳಲ್ಲಿ ಶೇರ್​ ಮಾಡಿದ್ದಾರೆ.

ನೋಟಿಫಿಕೇಶನ್​ ತಪ್ಪಾದ ದಾರಿಯಲ್ಲಿ ಹೋಗಿದ್ದಕ್ಕೆ ಈ ವ್ಯಕ್ತಿಯು ನನ್ನ ಮೇಲೆ ಜನಾಂಗೀಯ ನಿಂದನೆ ಮಾಡಿದ್ದಾನೆ. ದಾರಿ ತಪ್ಪಿದ್ದಕ್ಕೆ ನನ್ನನ್ನು ದೂರಿದ ಚಾಲಕ ನಾನು ಭಾರತೀಯಳು ಎಂದು ವ್ಯಂಗ್ಯವಾಗಿ ನುಡಿದಿದ್ದಾನೆ. ನಾನು ಚೀನಾದವನು, ನೀವು ಭಾರತೀಯರು, ಅತ್ಯಂತ ಕೆಟ್ಟ ಗ್ರಾಹಕರು ಎಂದು ಹೇಳಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಮಹಿಳೆಯು ತನ್ನನ್ನ ತಾನು ಸಿಂಗಾಪುರದ ಯುರೇಷಿಯನ್​ ಎಂದು ಗುರುತಿಸಿಕೊಂಡಿದ್ದಾರೆ. ನಾನು ಸಿಂಗಾಪುರ, ಯುರೇಷಿಯನ್​ಗೆ ಸೇರಿದವಳು. ನಾನು ಭಾರತೀಯಳಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಅದೇನೆ ಇರ್ಲಿ ಸಿಂಗಾಪುರದಲ್ಲಿಯೂ ಭಾರತೀಯರು ಇದ್ದಾರೆ ಎಂದು ಮಹಿಳೆ ಹೇಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read