ಶಾಲಾ ಬಸ್ಸಿನಿಂದ ಜಿಗಿದು ಸೂಪರ್‌ ಡಾನ್ಸ್‌ ಮಾಡಿದ ಬಾಲಕಿ: ಸ್ಟಾರ್‌ ಎಂದ ನೆಟ್ಟಿಗರು

ಇಂಟರ್‌ನೆಟ್‌ನಲ್ಲಿ ಈಗ ಹಾಡು, ನೃತ್ಯಗಳದ್ದೇ ಕಾರುಬಾರು. ಅದರಲ್ಲಿಯೂ ಹುಟ್ಟು ಪ್ರತಿಭೆಗಳಾದ ಪುಟ್ಟ ಮಕ್ಕಳ ನೃತ್ಯವಂತೂ ಸಕತ್‌ ಸೌಂಡ್‌ ಮಾಡುತ್ತದೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್‌ ಆಗಿದೆ.

ಸಂಜಯ್ ದತ್ ಅವರ ʼಪ್ಯಾರ್ ಆಗಯಾ ರೇʼ ಗೆ ಪುಟ್ಟ ಹುಡುಗಿಯೊಬ್ಬಳು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್‌ ಆಗಿದ್ದು, ನೆಟ್ಟಿಗರನ್ನು ಸಂತಸದಲ್ಲಿ ತೇಲಿಸುತ್ತಿದೆ. ಬಾಲಕಿ ತನ್ನ ಶಾಲಾ ಸಮವಸ್ತ್ರದಲ್ಲಿ ಈ ನೃತ್ಯ ಮಾಡಿದ್ದಾಳೆ.

ಇದೀಗ ವೈರಲ್ ಆಗಿರುವ ವಿಡಿಯೋವನ್ನು ಅರ್ಜ್-ಎ-ಇಷ್ಕ್ ಎಂಬ ಪೇಜ್ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. 26 ಸೆಕೆಂಡ್‌ಗಳ ಕ್ಲಿಪ್‌ನಲ್ಲಿ, ಪುಟ್ಟ ಶಾಲಾ ಬಾಲಕಿಯೊಬ್ಬಳು ತನ್ನ ಶಾಲಾ ಬಸ್‌ನಿಂದ ಜಿಗಿಯುತ್ತಾಳೆ. ನಂತರ ಆಕರ್ಷಕ ಬೀಟ್‌ಗಳನ್ನು ಉತ್ಸಾಹದಿಂದ ಕೇಳಲು ಪ್ರಾರಂಭಿಸುತ್ತಾಳೆ.

ನಂತರ ನೃತ್ಯ ಮಾಡುವ ಶುರು ಮಾಡಿ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾಳೆ. ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ ಸುಮಾರು 20 ಸಾವಿರ ವೀಕ್ಷಣೆಗಳನ್ನು ಗಳಿಸಿದೆ. ಟ್ವಿಟ್ಟರ್ ಬಳಕೆದಾರರು ಹುಡುಗಿಯ ಕಾರ್ಯಕ್ಷಮತೆಯನ್ನು ಇಷ್ಟಪಟ್ಟಿದ್ದು, ಈಕೆಯೊಬ್ಬ ಸ್ಟಾರ್‌ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read