ಬೆಂಗಳೂರು: ಯಶವಂತಪುರ -ವಿಜಯಪುರ ನಡುವೆ 2022 ರಿಂದ ಸಂಚರಿಸುತ್ತಿರುವ ವಿಶೇಷ ಎಕ್ಸ್ಪ್ರೆಸ್ ರೈಲು ಡಿಸೆಂಬರ್ 8 ರಿಂದ ನಿತ್ಯವೂ ಸಂಚರಿಸಲಿದೆ.
ವಿಶೇಷ ಎಕ್ಸ್ಪ್ರೆಸ್ ರೈಲು ಡಿಸೆಂಬರ್ 8 ರಿಂದ ಸಾಮಾನ್ಯ ಎಕ್ಸ್ಪ್ರೆಸ್ ರೈಲು(16547/ 16548) ಆಗಿ ಪರಿವರ್ತನೆಯಾಗಲಿದೆ. ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಟಿಕೆಟ್ ದರ ಕಡಿಮೆಯಾಗಲಿದ್ದು, ಡಿಸೆಂಬರ್ 8 ರಿಂದ ಪ್ರಯಾಣಿಕರು ಸೌಲಭ್ಯ ಬಳಸಿಕೊಳ್ಳಬಹುದಾಗಿದೆ.
