ಯುವಜೋಡಿಯಿಂದ ಅಪಾಯಕಾರಿ ಸ್ಟಂಟ್; ಬೆಚ್ಚಿಬೀಳಿಸುತ್ತೆ ಪೊಲೀಸರು ಹಂಚಿಕೊಂಡಿರುವ ವಿಡಿಯೋ

ಪೊಲೀಸರು ಎಷ್ಟೇ ಬುದ್ಧಿ ಹೇಳಿದ್ರೂ, ಕಾನೂನು ಕ್ರಮ ತೆಗೆದುಕೊಂಡರೂ ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್ ಮಾಡುವವರು ಕಾಣಿಸಿಕೊಳ್ತಾನೇ ಇದ್ದಾರೆ.

ಈ ಬಗ್ಗೆ ಜಾಗೃತಿ ಮೂಡಿಸಲು ದೆಹಲಿ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಅಪಾಯಕಾರಿ ಸ್ಟಂಟ್ ಪ್ರದರ್ಶನದ ವಿಡಿಯೋ ಬೆಚ್ಚಿಬೀಳಿಸಿದೆ.

ವಿಡಿಯೋದಲ್ಲಿ ಯುವಜೋಡಿಯೊಂದು ರಾತ್ರಿ ವೇಳೆ ಪ್ರಮುಖ ರಸ್ತೆಯಲ್ಲಿ ಬೈಕ್ ಮೇಲೆ ಕುಳಿತು ಸ್ಟಂಟ್ ಪ್ರದರ್ಶಿಸಿದೆ.

ವೇಗವಾಗಿ ಯುವಕ ಬೈಕ್ ಚಲಾಯಿಸ್ತಿದ್ದು ಯುವತಿ ಆತನ ಹಿಂದೆ ಕೂತಿದ್ದಾಳೆ. ಮುಂಭಾಗದ ಚಕ್ರ ಮೇಲೆತ್ತಿ ಸ್ಟಂಟ್ ಪ್ರದರ್ಶನ ಮಾಡ್ತಿದ್ದ ಯುವಕ ಒಂದು ಹಂತದಲ್ಲಿ ಆಯ ತಪ್ಪುತ್ತಾನೆ. ಇದರಿಂದ ಹಿಂದೆ ಕೂತಿದ್ದ ಯುವತಿ ಕೆಳಗೆ ಬೀಳುತ್ತಾಳೆ, ನಂತರ ಯುವಕ ಕೂಡ ಬೈಕ್ ನಿಂದ ಕೆಳಗೆ ಇಳಿದು ಬೈಕ್ ಹಿಡಿಯಲು ಪ್ರಯತ್ನಿಸುತ್ತಾ ಓಡುತ್ತಾನೆ.

ಈ ವಿಡಿಯೋ ಪೋಸ್ಟ್ ಮಾಡಿ “ಸುರಕ್ಷಿತವಾಗಿ ಚಾಲನೆ” ಮಾಡುವಂತೆ ಜನರಿಗೆ ಪೊಲೀಸರು ಸಲಹೆ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

https://twitter.com/DelhiPolice/status/1674024501011677184?ref_src=twsrc%5Etfw%7Ctwcamp%5Etweetembed%7Ctwterm%5E16

https://twitter.com/Khurana_Gaurav/status/1674075763576918021?ref_src=twsrc%5Etfw%7Ctwcamp%5Etweetembed%7Ctwterm%5E1674075763576918021%7Ctwgr%5E33c985ba75c46a91e6a75322c8dc0c6f238c1a33%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fcouple-falls-off-bike-while-performing-dangerous-stunts-delhi-police-tweets-video-2399524-2023-06-29

https://twitter.com/AbhaySi75315875/status/1674027573670727683?ref_src=twsrc%5Etfw%7Ctwcamp%5Etweetembed%7Ctwterm%5E1674027573670727683%7Ctwgr%5E33c985ba75c46a91e6a75322c8dc0c6f238c1a33%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fcouple-falls-off-bike-while-performing-dangerous-stunts-delhi-police-tweets-video-2399524-2023-06-29

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read