ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ವಿಜಯೇಂದ್ರ ಡಮ್ಮಿ ಎಂಬುದು ಹೈಕಮಾಂಡ್ ಗೂ ಗೊತ್ತಾಗಿದೆ ಎಂದಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಬಿಜೆಪಿ ರಾಜ್ಯಾಧ್ಯಕ್ಷರ ನೇಮಕದಲ್ಲಿ ವಿಳಂಬವಾಗಲು ಕಾರಣ ವಿಜಯೇಂದ್ರ ಡಮ್ಮಿ ಎಂಬುದು ಹೈಕಮಾಂಡ್ ಗೆ ಮನವರಿಕೆಯಾಗಿದೆ. ಹಾಗಾಗಿ ವಿಳಂಬವಾಗುತ್ತಿದೆ. ವಿಳಂಬಮಾಡುತ್ತಿದ್ದಾರೆ ಎಂದರೆ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲ್ಲ ಎಂದರ್ಥ ಎಂದು ಹೇಳಿದ್ದಾರೆ.
ವಿ.ಸೋಮಣ್ಣ ಅವರು ಬೇರೆ ಬೇರೆ ಕೆಲಸದ ಕಾರಣದಿಂದಾಗಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿರಬಹುದು. ಆದರೆ ಸೋಮಣ್ಣ ಕೂಡ ರಾಅಜ್ಯಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಎಂದರು.
ಇನ್ನು ಆ.೨ರಂದು ವಿಜಯಪುರಕ್ಕೆ ವಿಜಯೇಂದ್ರ ಭೇಟಿ ವಿಚಾರವಾಗಿ ಮಾತನಾಡಿದ ಯತ್ನಾಳ್, ನಾನು ಪಕ್ಷದಲ್ಲಿದ್ದಾಗ ವಿಜಯೇಂದ್ರಗೆ ವಿಜಯಪುರಕ್ಕೆ ಭೇಟಿ ಕೊಡಲು ಧೈರ್ಯ ಇರಲಿಲ್ಲ. ಈಗ ನಾನು ಪಕ್ಷ ಬಿಟ್ಟ ಮೇಲೆ ವಿಅಜ್ಯಪುರಕ್ಕೆ ಆಗಮಿಸುತ್ತಿದ್ದಾರೆ ಎಂದರು. ಅವರು ಸಭೆ ಮಾಡಲಿ, ಬಿಡಲಿ ವಿಜಯೇಂದ್ರ ಅವರಿಂದ ಬಿಜೆಪಿ ಉದ್ಧಾರ ಆಗಲ್ಲ. ಸುಮ್ಮನೇ ಇಲ್ಲಿಗೆ ಬಂದು ಏನು ಮಾಡ್ತಾರೆ? ಎಂದು ಪ್ರಶ್ನಿಸಿದ್ದಾರೆ.